ನಮ್ಮ ಕ್ರೈಸ್ತ ಜೀವನ
ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕ ಬಳಸಿ, ಯೆಹೋವ ಮತ್ತು ಯೇಸುವಿನ ಮೇಲೆ ನಂಬಿಕೆ ಬೆಳೆಸಿ
ಬೈಬಲ್ ವಿದ್ಯಾರ್ಥಿಗಳು ದೇವರನ್ನ ಮೆಚ್ಚಿಸಬೇಕಂದ್ರೆ ಬಲವಾದ ನಂಬಿಕೆ ಬೆಳೆಸಬೇಕು. (ಇಬ್ರಿ 11:6) ಅದಕ್ಕಾಗಿ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕವನ್ನು ನಾವು ಬಳಸಬೇಕು. ಈ ಪುಸ್ತಕದಲ್ಲಿ ಮುಖ್ಯ ವಚನಗಳು, ಚರ್ಚಿಸುವಂತ ವಿಷಯಗಳು, ಯೋಚಿಸುವಂತೆ ಮಾಡುವ ಪ್ರಶ್ನೆಗಳು, ಮನಮುಟ್ಟುವ ವಿಡಿಯೋಗಳು ಮತ್ತು ಸುಂದರವಾದ ಚಿತ್ರಗಳು ಇವೆ. ಬೈಬಲ್ ವಿದ್ಯಾರ್ಥಿಗಳು ಯೆಹೋವ ದೇವರನ್ನ ಮೆಚ್ಚಿಸೋ ಗುಣಗಳನ್ನ ಬೆಳೆಸಿಕೊಳ್ಳಲು ಮತ್ತು ಆತನ ಜೊತೆ ಒಳ್ಳೇ ಸ್ನೇಹ ಬೆಸೆಯಲು ಸಹಾಯ ಮಾಡಬೇಕು. ಹೀಗೆ ನಾವು ಅವರನ್ನ ಬೆಂಕಿಯಲ್ಲಿ ಸುಟ್ಟು ಹೋಗದಿರೋ ವಿಷಯಗಳಿಂದ ಕಟ್ಟಬಹುದು.—1ಕೊರಿಂ 3:12-15.
ಕಣ್ಣಿಗೆ ಕಾಣದ ದೇವರನ್ನ ಫ್ರೆಂಡ್ ಮಾಡ್ಕೊಳ್ಳೋಕೆ ಸಾಧ್ಯನೇ ಇಲ್ಲ ಅಂತ ಕೆಲವರು ನೆನಸ್ತಾರೆ. ಹಾಗಾಗಿ ಒಳ್ಳೇ ಗುಣಗಳಿರೋ ಯೆಹೋವನ ಮೇಲೆ ನಂಬಿಕೆ ಬೆಳೆಸಿಕೊಳ್ಳಲು ನಾವು ಅವರಿಗೆ ಸಹಾಯ ಮಾಡಬೇಕು.
“ಎಂದೆಂದೂ ಖುಷಿಯಾಗಿ ಬಾಳೋಣ!” ಪುಸ್ತಕ ಬಳಸಿ, ಯೆಹೋವನ ಮೇಲೆ ನಂಬಿಕೆ ಬೆಳೆಸಿ ಅನ್ನೋ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳಿಗೆ ಉತ್ತರಿಸಿ:
-
ಸ್ಟಡಿಗಾಗಿ ಸಹೋದರಿ ಚೆನ್ನಾಗಿ ತಯಾರಿ ಮಾಡಿದ್ರು ಅಂತ ಹೇಗೆ ಗೊತ್ತಾಗುತ್ತೆ?
-
ಯೆಶಾಯ 41:10, 13ರಲ್ಲಿರೋ ವಿಷಯದ ಕಡೆಗೆ ವಿದ್ಯಾರ್ಥಿಯ ಗಮನ ಸೆಳೆಯಲು ಸೂಕ್ತವಾದ ಯಾವ ಪ್ರಶ್ನೆಗಳನ್ನು ಸಹೋದರಿ ಕೇಳಿದ್ರು?
-
ವಿಡಿಯೋ ಮತ್ತು ಬೈಬಲ್ ವಚನಗಳು ವಿದ್ಯಾರ್ಥಿಯ ಮೇಲೆ ಯಾವ ಪ್ರಭಾವ ಬೀರಿತು?
ತುಂಬ ಜನರಿಗೆ ಬಿಡುಗಡೆ ಬೆಲೆ ಅಂದ್ರೆ ಏನಂತಾನೇ ಗೊತ್ತಿಲ್ಲ ಅಥವಾ ಬಿಡುಗಡೆ ಬೆಲೆಯನ್ನ ದೇವರು ನಮಗಾಗಿ ಕೊಟ್ಟಿದ್ದು ಅಂತಾನೇ ಯೋಚಿಸಲ್ಲ. (ಗಲಾ 2:20) ಹಾಗಾಗಿ ಯೇಸು ಕೊಟ್ಟ ಬಿಡುಗಡೆ ಬೆಲೆ ಮೇಲೆ ನಂಬಿಕೆ ಇಡಲು ನಾವು ಅವರಿಗೆ ಸಹಾಯ ಮಾಡಬೇಕು.
“ಎಂದೆಂದೂ ಖುಷಿಯಾಗಿ ಬಾಳೋಣ!” ಪುಸ್ತಕ ಬಳಸಿ, ಯೇಸು ಮೇಲೆ ನಂಬಿಕೆ ಬೆಳೆಸಿ ಅನ್ನೋ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳಿಗೆ ಉತ್ತರಿಸಿ:
-
ಸ್ಟಡಿಗಾಗಿ ಸಹೋದರ ಚೆನ್ನಾಗಿ ತಯಾರಿ ಮಾಡಿದ್ರು ಅಂತ ಹೇಗೆ ಗೊತ್ತಾಗುತ್ತೆ?
-
“ಇದನ್ನೂ ನೋಡಿ” ವಿಭಾಗದಲ್ಲಿರೋ ವಿಷಯವನ್ನ ವಿದ್ಯಾರ್ಥಿಗೆ ಸಹಾಯ ಮಾಡೋಕೆ ಸಹೋದರ ಹೇಗೆ ಬಳಸಿದ್ರು?
-
ವಿದ್ಯಾರ್ಥಿಗಳಿಗಾಗಿ ಪ್ರಾರ್ಥಿಸೋದು ಯಾಕಷ್ಟು ಪ್ರಾಮುಖ್ಯ?