ನಮ್ಮ ಕ್ರೈಸ್ತ ಜೀವನ
“ಪ್ರೀತಿ . . . ಹೆಮ್ಮೆಯಿಂದ ಬೀಗಲ್ಲ”
ನಮ್ಮಲ್ಲಿ ಪ್ರೀತಿ ಇದ್ರೆ ದೀನತೆ ತೋರಿಸ್ತೀವಿ. (1ಕೊರಿಂ 13:4) ನಾವು ಸಹೋದರರನ್ನು ಪ್ರೀತಿಸೋದಾದ್ರೆ ನಮ್ಮನ್ನೇ ನಾವು ಶ್ರೇಷ್ಠರಾಗಿ ನೋಡಲ್ಲ. ನಾವು ಬೇರೆಯವರಲ್ಲಿರೋ ಒಳ್ಳೇ ಗುಣಗಳನ್ನೇ ನೋಡ್ತೀವಿ ಮತ್ತು ನಮ್ಮಲ್ಲಿರೋ ಕೌಶಲಗಳನ್ನ ಅವರಿಗೆ ಸಹಾಯ ಮಾಡೋಕೆ ಬಳಸುತ್ತೀವಿ. (ಫಿಲಿ 2:3, 4) ನಾವು ಇಂಥ ಪ್ರೀತಿ ತೋರಿಸೋದಾದ್ರೆ ಯೆಹೋವ ದೇವರು ನಮ್ಮನ್ನ ತನ್ನ ಸೇವೆಯಲ್ಲಿ ಬಳಸ್ಕೊಳ್ತಾನೆ.
ಪ್ರೀತಿ ಹೇಗೆ ನಡೆದುಕೊಳ್ಳುತ್ತೆ ಅಂತ ನೆನಪಿಡಿ—ಉಬ್ಬಿಕೊಳ್ಳುವುದಿಲ್ಲ ಅನ್ನೋ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳಿಗೆ ಉತ್ತರಿಸಿ:
-
ಅಬ್ಷಾಲೋಮನಿಗೆ ಯಾವ ಸಾಮರ್ಥ್ಯಗಳಿತ್ತು?
-
ಅವನು ತನ್ನ ಸಾಮರ್ಥ್ಯಗಳನ್ನ ಹೇಗೆ ದುರುಪಯೋಗಿಸಿದ?
-
ಹೆಮ್ಮೆಯಿಂದ ಬೀಗದೆ ಇರೋಕೆ ನಾವೇನು ಮಾಡಬೇಕು?—ಗಲಾ 5:26