ನಮ್ಮ ಕ್ರೈಸ್ತ ಜೀವನ
‘ಪ್ರೀತಿ ಎಲ್ಲವನ್ನ ನಿರೀಕ್ಷಿಸುತ್ತೆ’
ನಿಸ್ವಾರ್ಥ ಪ್ರೀತಿ ಇರೋದಾದ್ರೆ ನಮ್ಮ ಸಹೋದರ ಸಹೋದರಿಯರ ಒಳ್ಳೇದನ್ನ ಬಯಸ್ತೀವಿ. (1ಕೊರಿಂ 13:4, 7) ಉದಾಹರಣೆಗೆ, ಒಬ್ಬ ವ್ಯಕ್ತಿ ಪಾಪ ಮಾಡಿ ಅವನಿಗೆ ಶಿಸ್ತು ಸಿಗೋದಾದ್ರೆ, ಆ ವ್ಯಕ್ತಿ ತಪ್ಪನ್ನ ತಿದ್ದಿಕೊಳ್ತಾನೆ ಅನ್ನೋ ನಿರೀಕ್ಷೆ ಇಡ್ತೀವಿ. ಬಲವಾದ ನಂಬಿಕೆ ಇಲ್ಲದವರಿಗೆ ನಾವು ತಾಳ್ಮೆ ತೋರಿಸುತ್ತೀವಿ, ಅವರಿಗೆ ಸಹಾಯನೂ ಮಾಡ್ತೀವಿ. (ರೋಮ 15:1) ಯಾರಾದ್ರೂ ಯೆಹೋವನನ್ನ ಬಿಟ್ಟು ಹೋದ್ರೆ ಅವರು ಮತ್ತೆ ವಾಪಸ್ ಬರ್ತಾರೆ ಅನ್ನೋ ನಿರೀಕ್ಷೆ ಇಡ್ತೀವಿ.—ಲೂಕ 15:17, 18.
ಪ್ರೀತಿ ಹೇಗೆ ನಡೆದುಕೊಳ್ಳುತ್ತೆ ಅಂತ ನೆನಪಿಡಿ—ಎಲ್ಲವನ್ನೂ ನಿರೀಕ್ಷಿಸುತ್ತೆ ಅನ್ನೋ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳಿಗೆ ಉತ್ತರಿಸಿ:
-
ಅಬ್ನೇರನ ನಿಷ್ಠೆ ಹೇಗೆ ಬದಲಾಯಿತು?
-
ಅಬ್ನೇರನ ಬೇಡಿಕೆಗೆ ದಾವೀದ ಮತ್ತು ಯೋವಾಬ ಹೇಗೆ ಪ್ರತಿಕ್ರಿಯಿಸಿದ್ರು?
-
ಸಭೆಯಲ್ಲಿ ಯಾರಾದ್ರೂ ತಪ್ಪು ಮಾಡಿದಾಗ ನಾವು ಯಾವ ನಿರೀಕ್ಷೆ ಇಡಬೇಕು?