ನಮ್ಮ ಕ್ರೈಸ್ತ ಜೀವನ
‘ಪ್ರೀತಿ ಕೆಟ್ಟದ್ರಲ್ಲಿ ಖುಷಿಪಡಲ್ಲ’
ನಿಜ ಕ್ರೈಸ್ತರು ಮಾಡುವ ಪ್ರತಿ ವಿಷಯದಲ್ಲೂ ಪ್ರೀತಿ ಎದ್ದು ಕಾಣುತ್ತೆ. ಪ್ರೀತಿ ‘ಕೆಟ್ಟದ್ರಲ್ಲಿ ಖುಷಿಪಡಲ್ಲ.’ (1ಕೊರಿಂ 13:4, 6) ಹಾಗಾಗಿ ನಾವು ಅನೈತಿಕತೆ, ಹಿಂಸಾಚಾರ ಇರುವ ಮನೋರಂಜನೆಯನ್ನು ನೋಡಲ್ಲ. ಅಷ್ಟೇ ಅಲ್ಲ, ಬೇರೆಯವರಿಗೆ ನೋವಾದಾಗ ಅಥವಾ ನಮಗೆ ನೋವು ಮಾಡಿದವರಿಗೆ ಕೆಟ್ಟದಾದಾಗ ನಾವು ಖುಷಿಪಡಲ್ಲ.—ಜ್ಞಾನೋ 17:5.
ಪ್ರೀತಿ ಹೇಗೆ ನಡೆದುಕೊಳ್ಳುತ್ತೆ ಅಂತ ನೆನಪಿಡಿ—ಅನೀತಿಯನ್ನು ಕಂಡು ಹರ್ಷಿಸುವುದಿಲ್ಲ ಅನ್ನೋ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳಿಗೆ ಉತ್ತರಿಸಿ:
-
ಸೌಲ ಮತ್ತು ಯೋನಾತಾನ ತೀರಿಹೋದ್ರು ಅಂತ ಗೊತ್ತಾದಾಗ ದಾವೀದನಿಗೆ ಹೇಗನಿಸ್ತು?
-
ಸೌಲ ಮತ್ತು ಯೋನಾತಾನನಿಗಾಗಿ ದಾವೀದ ಯಾವ ಶೋಕ ಗೀತೆ ರಚಿಸಿದ?
-
ಸೌಲ ತೀರಿಹೋದಾಗ ದಾವೀದ ಯಾಕೆ ಖುಷಿಪಡಲಿಲ್ಲ?