ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಸಾಮಾಜಿಕ ಗಲಭೆಯಾದಾಗ ಏನು ಮಾಡಬೇಕು?

ಸಾಮಾಜಿಕ ಗಲಭೆಯಾದಾಗ ಏನು ಮಾಡಬೇಕು?

ನಾವು ಕೊನೇ ದಿನಗಳಲ್ಲಿ ಇರೋದ್ರಿಂದ ಸಾಮಾಜಿಕ ಗಲಭೆಗಳು, ಭಯೋತ್ಪಾದನೆ, ಮತ್ತು ಯುದ್ಧಗಳು ಜಾಸ್ತಿ ಆಗ್ತಾ ಹೋಗುತ್ತೆ. (ಪ್ರಕ 6:4) ಇಂಥ ಸಮಯದಲ್ಲಿ ಅದನ್ನು ಎದುರಿಸಲು ನಾವು ಹೇಗೆ ತಯಾರಾಗಬಹುದು?

  • ಆಧ್ಯಾತ್ಮಿಕವಾಗಿ ತಯಾರಾಗಿ: ಯೆಹೋವನ ಮೇಲೆ ಮತ್ತು ಆತನ ಸಂಘಟನೆ ಮೇಲೆ ನಂಬಿಕೆ ಇಡೋಕೆ ತಟಸ್ಥರಾಗಿರೋಕೆ ಬೈಬಲ್‌ ತತ್ವಗಳನ್ನ, ಬೈಬಲ್‌ ಘಟನೆಗಳನ್ನ ತಿಳ್ಕೊಂಡಿರಿ. (ಜ್ಞಾನೋ 12:5; ಕಾವಲಿನಬುರುಜು13 9/15 ಪುಟ 14 ಪ್ಯಾರ 11) ನಮ್ಮ ಸಹೋದರರ ಜೊತೆ ಬಲವಾದ ಸಂಬಂಧ ಬೆಳೆಸಿಕೊಳ್ಳಲು ಇದೇ ಸರಿಯಾದ ಸಮಯ.—1ಪೇತ್ರ 4:7, 8

  • ಶಾರೀರಿಕವಾಗಿ ತಯಾರಾಗಿರಿ: ಸುರಕ್ಷಿತವಾಗಿರೋಕೆ ಮತ್ತು ಅಗತ್ಯವಿರೊ ವಸ್ತುಗಳನ್ನ ಶೇಖರಿಸಿ ಇಡೋಕೆ ಮೊದಲೇ ಪ್ಲ್ಯಾನ್‌ ಮಾಡಿ. ಒಂದುವೇಳೆ ಮನೆ ಬಿಟ್ಟು ಹೋಗೋ ಪರಿಸ್ಥಿತಿ ಬಂದರೆ ಏನು ಮಾಡಬೇಕು ಅಂತ ಯೋಚಿಸಿ. ನಿಮ್ಮ ಎಮರ್ಜೆನ್ಸಿ ಬ್ಯಾಗ್‌ ಅಥವಾ ಗೋ ಬ್ಯಾಗಲ್ಲಿ ನಿಮಗೆ ಅಗತ್ಯವಿರುವ ವಸ್ತುಗಳು ಮತ್ತು ಹಣ ಇದೆಯಾ ಅಂತ ನೋಡಿಕೊಳ್ಳಿ.—ಯೆಶಾ 32:2; ಕಾವಲಿನಬುರುಜು12 4/1 ಪುಟ 6-7; ಎಚ್ಚರ!17.5-E ಪುಟ 3-7

ಗಲಭೆ ಆದಾಗಲೂ ನಿಮ್ಮ ಆಧ್ಯಾತ್ಮಿಕ ರೂಢಿಗಳನ್ನು ಮುಂದುವರಿಸಿ. (ಫಿಲಿ 1:10) ತುಂಬ ಅಗತ್ಯ ಇದ್ರೆ ಮಾತ್ರ ಹೊರಗೆ ಹೋಗಿ. (ಮತ್ತಾ 10:16) ಆಹಾರ ಮತ್ತು ಬೇರೆ ಅಗತ್ಯವಾದ ವಸ್ತುಗಳನ್ನ ಬೇರೆಯವರಿಗೂ ಹಂಚಿ.—ರೋಮ 12:13.

ವಿಪತ್ತು ಬರುವ ಮುಂಚೆನೇ ತಯಾರಾಗಿರಿ ಅನ್ನೋ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳಿಗೆ ಉತ್ತರಿಸಿ:

  • ವಿಪತ್ತಿನ ಸಮಯದಲ್ಲಿ ಯೆಹೋವ ನಮಗೆ ಹೇಗೆ ಸಹಾಯ ಮಾಡುತ್ತಾನೆ?

  • ಮೊದಲೇ ತಯಾರಾಗೋಕೆ ನಾವು ಏನು ಮಾಡಬೇಕು?

  • ವಿಪತ್ತು ಸಂಭವಿಸಿದವರಿಗೆ ನಾವು ಹೇಗೆ ಸಹಾಯ ಮಾಡಬಹುದು?