ನಮ್ಮ ಕ್ರೈಸ್ತ ಜೀವನ
ಈಗ ನಡೆಯುತ್ತಿರುವ ಘಟನೆಗಳನ್ನು ಸೇವೆಯಲ್ಲಿ ಬಳಸಿ
ಯೇಸು ಜನರಿಗೆ ಕಲಿಸುವಾಗ ಆಗ ನಡೆಯುತ್ತಿರುವ ಘಟನೆಗಳನ್ನು ಬಳಸಿದನು. (ಲೂಕ 13:1-5) ಅದೇ ತರ, ನಾವು ಈಗ ನಡೆಯುತ್ತಿರುವ ಘಟನೆಗಳನ್ನು ಬಳಸಿ ಜನರ ಆಸಕ್ತಿಯನ್ನು ಕೆರಳಿಸಬೇಕು. ಬೆಲೆ ಏರಿಕೆ, ನೈಸರ್ಗಿಕ ವಿಪತ್ತು, ಸಾಮಾಜಿಕ ಗಲಭೆ, ಡ್ರಗ್ಸ್ ಚಟ ಅಥವಾ ಇದೇ ತರದ ಬೇರೆಬೇರೆ ವಿಷಯಗಳ ಬಗ್ಗೆ ಜನರು ಯೋಚಿಸುವಂಥ ಪ್ರಶ್ನೆಗಳನ್ನ ಕೇಳಿ. ನೀವು ಹೀಗೆ ಕೇಳಬಹುದು: “. . . ಇದಕ್ಕೆ ಯಾವತ್ತಾದ್ರು ಕೊನೆ ಇದೆಯಾ?” ಅಥವಾ “. . . ಇದಕ್ಕೆ ಯಾವುದಾದ್ರು ಪರಿಹಾರ ಇದೆಯಾ?” ನಂತರ ಈ ವಿಷಯಗಳಿಗೆ ಸಂಬಂಧಿಸಿದ ವಚನಗಳನ್ನು ತೋರಿಸಿ. ಅವರು ಆಸಕ್ತಿ ತೋರಿಸಿದ್ರೆ, ಬೋಧನಾ ಸಾಧನ ವಿಭಾಗದಿಂದ ಒಂದು ಪ್ರಕಾಶನ ಅಥವಾ ವಿಡಿಯೋವನ್ನ ತೋರಿಸಿ. ನಮ್ಮ ಟೆರಿಟೊರಿಯಲ್ಲಿರುವ ಜನರ ಹೃದಯ ಮುಟ್ಟೋಕೆ ಪ್ರಯತ್ನಿಸೋದಾದ್ರೆ, ‘ಸಿಹಿಸುದ್ದಿಗಾಗಿ ಎಲ್ಲ ಮಾಡ್ತೀವಿ’ ಅಂತ ತೋರಿಸಿಕೊಡ್ತೀವಿ.—1ಕೊರಿಂ 9:22, 23.
ನಿಮ್ಮ ಟೆರಿಟೊರಿಯಲ್ಲಿರುವ ಜನರಿಗೆ ಯಾವ ವಿಷಯ ಇಷ್ಟ ಆಗುತ್ತೆ?