ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಯೆಹೋವ ನಿಮ್ಮನ್ನ ನೋಡೋ ತರಾನೇ ನೀವೂ ನೋಡಿ

ಯೆಹೋವ ನಿಮ್ಮನ್ನ ನೋಡೋ ತರಾನೇ ನೀವೂ ನೋಡಿ

“ಯೆಹೋವ ತನ್ನ ಜನ್ರನ್ನ ನೋಡಿ ಖುಷಿಪಡ್ತಾನೆ.” (ಕೀರ್ತ 149:4) ನಾವು ಅಪರಿಪೂರ್ಣರಾಗಿದ್ರೂ ಯೆಹೋವನು ನಮ್ಮಲ್ಲಿರೋ ಒಳ್ಳೇ ಗುಣಗಳನ್ನ ನೋಡ್ತಾನೆ. ಮುಂದೆ ನಮ್ಮಿಂದ ಏನು ಮಾಡೋಕೆ ಆಗುತ್ತೆ ಅನ್ನೋದ್ರ ಕಡೆ ಗಮನ ಕೊಡ್ತಾನೆ. ಕೆಲವೊಮ್ಮೆ ನಾವು ನಮ್ಮಲ್ಲಿರೋ ಒಳ್ಳೇ ಗುಣಗಳನ್ನ ನೋಡೋಕೆ ತಪ್ಪಿಹೋಗ್ತೀವಿ. ಬೇರೆಯವರು ನಮ್ಮನ್ನ ಕೀಳಾಗಿ ನೋಡಿದಾಗ ‘ನಾನೇನಕ್ಕೂ ಲಾಯಕ್ಕಿಲ್ಲ’ ಅಂತ ಅನಿಸಿಬಿಡುತ್ತೆ. ನಾವು ಮಾಡಿದ ತಪ್ಪಿನ ಬಗ್ಗೆ ಕೊರಗ್ತಾ ಇದ್ರೆ, ಯೆಹೋವ ದೇವರು ನಮ್ಮನ್ನ ನಿಜವಾಗ್ಲೂ ಪ್ರೀತಿಸ್ತಾನಾ ಅನ್ನೋ ಸಂಶಯ ಬರುತ್ತೆ. ಈ ರೀತಿ ಯೋಚ್ನೆಗಳಿಂದ ದೂರ ಇರೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?

ಮನುಷ್ಯರಿಗೆ ನೋಡೋಕಾಗದೆ ಇರೋದನ್ನ ದೇವರು ನೋಡ್ತಾನೆ ಅನ್ನೋದನ್ನ ಮರಿಬೇಡಿ. (1ಸಮು 16:7) ಅಂದ್ರೆ ನಮ್ಮ ಬಗ್ಗೆ ನಮಗೇ ಗೊತ್ತಿಲ್ಲದ ವಿಷಯಗಳೂ ಯೆಹೋವನಿಗೆ ಗೊತ್ತಿರುತ್ತೆ. ಯೆಹೋವ ದೇವರಿಗೆ ನಮ್ಮ ಬಗ್ಗೆ ಹೇಗನಿಸುತ್ತೆ ಅಂತ ಬೈಬಲಿನಿಂದ ಗೊತ್ತಾಗುತ್ತೆ. ಯೆಹೋವ ತನ್ನ ಆರಾಧಕರನ್ನ ಎಷ್ಟು ಪ್ರೀತಿಸ್ತಾನೆ ಅಂತ ಬೈಬಲಿನಲ್ಲಿರೋ ವಚನಗಳಿಂದ ಮತ್ತು ಘಟನೆಗಳಿಂದ ಗೊತ್ತಾಗುತ್ತೆ.

ಯೆಹೋವ ನಿಮ್ಮನ್ನ ಖಂಡಿತ ಕ್ಷಮಿಸ್ತಾನೆ ಅನ್ನೋ ವಿಡಿಯೋ ನೋಡಿ, ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಒಬ್ಬ ಓಟಗಾರ ಮತ್ತವನ ತಂದೆಯ ಉದಾಹರಣೆಯಿಂದ ಯೆಹೋವ ನಮ್ಮನ್ನ ಹೇಗೆ ನೋಡ್ತಾನೆ ಅಂತ ಗೊತ್ತಾಗುತ್ತೆ?

  • ದೊಡ್ಡ ತಪ್ಪು ಮಾಡಿದ ವ್ಯಕ್ತಿ ಯೆಹೋವನ ಜೊತೆ ತನಗಿರೋ ಸಂಬಂಧವನ್ನ ಕಾಪಾಡಿಕೊಳ್ಳೋಕೆ ಬೇಕಾಗಿರೋದನ್ನೆಲ್ಲ ಮಾಡಿದ ಮೇಲೆ, ಯೆಹೋವ ತನ್ನನ್ನ ಪ್ರೀತಿಸ್ತಾನೆ ಅಂತ ಅವನು ಹೇಗೆ ಭರವಸೆ ಇಡಬಹುದು?—1ಯೋಹಾ 3:19, 20.

  • ದಾವೀದ ಮತ್ತು ಯೆಹೋಷಾಫಾಟನ ಬಗ್ಗೆ ಓದಿ ಧ್ಯಾನಿಸಿದ್ರಿಂದ ಈ ಸಹೋದರನಿಗೆ ಹೇಗೆ ಪ್ರಯೋಜನ ಆಯ್ತು?