ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಧರ್ಮಭ್ರಷ್ಟರಿಂದ ದೂರ ಇರಿ

ಧರ್ಮಭ್ರಷ್ಟರಿಂದ ದೂರ ಇರಿ

ದೇವ್ರ ಮೇಲೆ ನಾವು ನಂಬಿಕೆ ಕಳ್ಕೊಬೇಕು ಅಂತ ಸೈತಾನ ಮತ್ತು ಅವನ ಹಿಂಬಾಲಕರು ಸತ್ಯದ ಜೊತೆ ಸುಳ್ಳನ್ನ ಬೆರೆಸ್ತಾರೆ. (2ಕೊರಿಂ 11:3) ಉದಾಹರಣೆಗೆ, ಅಶ್ಶೂರ್ಯದವರು ಇಲ್ಲಸಲ್ಲದ ಸುಳ್ಳು ಹೇಳಿ ಯೆಹೋವನ ಜನ್ರು ನಂಬಿಕೆ ಕಳ್ಕೊಳ್ಳೋ ತರ ಮಾಡಿದ್ರು. (2ಪೂರ್ವ 32:10-15) ಇವತ್ತು ಧರ್ಮಭ್ರಷ್ಟರು ಇದನ್ನೇ ಮಾಡ್ತಿದ್ದಾರೆ. ಧರ್ಮಭ್ರಷ್ಟರ ಸುಳ್ಳು ಬೋಧನೆಗಳಿಂದ ನಾವು ಹೇಗೆ ದೂರ ಇರಬಹುದು? ಅದನ್ನ ನಾವು ವಿಷದ ತರ ನೋಡಬೇಕು! ಆ ವಿಷ್ಯಗಳನ್ನ ಓದಬೇಡಿ, ಅಂಥ ಮೆಸೇಜ್‌ಗಳಿಗೆ ರಿಪ್ಲೈ ಮಾಡಬೇಡಿ, ಬೇರೆಯವ್ರಿಗೂ ಹೇಳಬೇಡಿ. ಯೆಹೋವ ಮತ್ತು ಆತನ ಸಂಘಟನೆ ಬಗ್ಗೆ ಸಂಶಯ ಹುಟ್ಟಿಸೋ ಮಾಹಿತಿಯನ್ನ ತಕ್ಷಣ ಗುರುತಿಸಿ, ಅದ್ರಿಂದ ದೂರ ಇರಿ!—ಯೂದ 3, 4.

‘ನಂಬಿಕೆಗೋಸ್ಕರ ಕಷ್ಟಪಟ್ಟು ಹೋರಾಡ್ತಾ ಇರಿ!’—ತುಣುಕು ಅನ್ನೋ ವಿಡಿಯೋ ನೋಡಿ, ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಇಂಟರ್‌ನೆಟ್‌ ಫೋರಮ್ಸ್‌ ಅಥವಾ ಇಂಟರ್‌ನೆಟ್‌ನಲ್ಲಿ ಬರೋ ಮೆಸೇಜ್‌ ಬಗ್ಗೆ ನಾವು ಯಾಕೆ ಎಚ್ಚರ ವಹಿಸಬೇಕು?

  • ನಾವು ಹೇಗೆ ರೋಮನ್ನರಿಗೆ 16:17ರಲ್ಲಿರೋ ಸಲಹೆನ ಪಾಲಿಸಬಹುದು?