ನಮ್ಮ ಕ್ರೈಸ್ತ ಜೀವನ
ಆಡಿಯೋ ಬೈಬಲನ್ನ ನೀವು ಚೆನ್ನಾಗಿ ಬಳಸ್ತಿದ್ದೀರಾ?
ಆಡಿಯೋ ಬೈಬಲ್ ಅಂದ್ರೇನು? ಹೊಸ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿಯ ರೆಕಾರ್ಡಿಂಗೇ ಆಡಿಯೋ ಬೈಬಲ್. ಆದಷ್ಟು ಹೆಚ್ಚು ಭಾಷೆಗಳಲ್ಲಿ ಇದನ್ನ ಮಾಡಲಾಗ್ತಿದೆ. ಈ ಆಡಿಯೋ ಬೈಬಲಿನ ವಿಶೇಷತೆ ಏನಂದ್ರೆ ರೆಕಾರ್ಡಿಂಗ್‌ಗಾಗಿ ಬೇರೆಬೇರೆ ಸಹೋದರರನ್ನ ಬಳಸಲಾಗಿದೆ. ಬೈಬಲಲ್ಲಿರೋ ಪದಗಳಿಗೆ ಒತ್ತುಕೊಟ್ಟು, ಭಾವನೆಯಿಂದ ಓದಲಾಗಿದೆ. ಅದಕ್ಕೆ ಅದನ್ನ ಚೆನ್ನಾಗಿ ಅರ್ಥ ಮಾಡಿಕೊಳ್ಳೋಕೆ ಆಗುತ್ತೆ.
ಆಡಿಯೋ ಬೈಬಲಿನಿಂದ ಕೆಲವರು ಹೇಗೆ ಪ್ರಯೋಜನ ಪಡ್ಕೊಳ್ತಿದ್ದಾರೆ? ಈ ರೆಕಾರ್ಡಿಂಗನ್ನ ಜೀವ ತುಂಬೋ ರೀತಿಯಲ್ಲಿ ಓದಿರೋದ್ರಿಂದ ತುಂಬ ಜನ ಅದನ್ನ ಯಾವಾಗ್ಲೂ ಕೇಳಿಸಿಕೊಳ್ಳೋಕೆ ಇಷ್ಟಪಡ್ತಾರೆ. ಅದನ್ನ ಕೇಳಿಸಿಕೊಂಡಾಗ ಘಟನೆಗಳೆಲ್ಲ ಕಣ್ಣ ಮುಂದೇನೇ ನಡಿಯೋ ತರ ಇದೆ. ಅಷ್ಟೇ ಅಲ್ಲ ವಿಷಯಗಳನ್ನ ಚೆನ್ನಾಗಿ ಅರ್ಥಮಾಡಿಕೊಳ್ಳೋಕೂ ಆಗ್ತಿದೆ ಅಂತ ಹೇಳ್ತಾರೆ. (ಜ್ಞಾನೋ 4:5) ಚಿಂತೆಯಿಂದ ಹೊರಗೆ ಬರೋಕೆ ಈ ಆಡಿಯೋ ಬೈಬಲ್ ಹೆಚ್ಚಿನವರಿಗೆ ಸಹಾಯ ಮಾಡಿದೆ.—ಕೀರ್ತ 94:19.
ಈ ಆಡಿಯೋ ಬೈಬಲ್ ನಮ್ಮ ಯೋಚನೆಗಳನ್ನ ಬಡಿದೆಬ್ಬಿಸುತ್ತೆ. (2ಪೂರ್ವ 34:19-21) ನಿಮಗೆ ಅರ್ಥ ಆಗೋ ಭಾಷೆಯಲ್ಲಿ ಆಡಿಯೋ ಬೈಬಲ್ ಇದ್ರೆ ಅದನ್ನ ಕೇಳಿಸ್ಕೊಳ್ಳೋ ರೂಢಿ ಮಾಡ್ಕೊಳ್ತೀರಾ?
ಆಡಿಯೋ ಬೈಬಲ್‌ನ ತಯಾರಿ—ತುಣುಕು ವಿಡಿಯೋ ನೋಡಿ, ಈ ಪ್ರಶ್ನೆಗೆ ಉತ್ರ ಕೊಡಿ:
ಆಡಿಯೋ ಬೈಬಲ್‌ನ ತಯಾರಿಕೆಯಲ್ಲಿ ನಿಮಗೇನು ಇಷ್ಟ ಆಯ್ತು?