ನಮ್ಮ ಕ್ರೈಸ್ತ ಜೀವನ
ಯೆಹೋವ “ಅಪ್ಪ ಇಲ್ಲದವನಿಗೆ ಅಪ್ಪ”
ಪ್ರತಿ ವರ್ಷ ತುಂಬ ಯುವಜನರು ಯೆಹೋವನ ಸ್ನೇಹಿತರಾಗೋಕೆ ಮುಂದೆ ಬರ್ತಿದ್ದಾರೆ. (ಕೀರ್ತ 110:3) ನಿಮ್ಮಲ್ಲಿ ಪ್ರತಿಯೊಬ್ಬರನ್ನೂ ಯೆಹೋವ ತುಂಬ ಅಮೂಲ್ಯವಾಗಿ ನೋಡ್ತಾನೆ. ಯುವ ಜನರಿಗೆ ಯೆಹೋವನ ಸೇವೆ ಮಾಡೋದು ಅಷ್ಟೇನು ಸುಲಭ ಅಲ್ಲ ಅಂತ ಆತನಿಗೆ ಗೊತ್ತಿದೆ. ಅದಕ್ಕೇ ಸೇವೆ ಮಾಡಕ್ಕೆ ಬೇಕಾದ ಸಹಾಯ ಮಾಡ್ತೀನಿ ಅಂತ ಮಾತುಕೊಟ್ಟಿದ್ದಾನೆ. ನಿಮಗೆ ಬರೀ ಅಪ್ಪ ಅಥವಾ ಅಮ್ಮ ಮಾತ್ರ ಇರೋದಾದ್ರೆ ಒಂದು ವಿಷಯ ನೆನಪಿಡಿ, ಯೆಹೋವ, “ಅಪ್ಪ ಇಲ್ಲದವನಿಗೆ ಅಪ್ಪ ಆಗ್ತಾನೆ.” (ಕೀರ್ತ 68:5) ನಿಮ್ಮ ಕುಟುಂಬದ ಪರಿಸ್ಥಿತಿ ಏನೇ ಇದ್ದರೂ ಯೆಹೋವ ಕೊಡೋ ತರಬೇತಿಯಿಂದ ಖಂಡಿತ ನೀವು ಯಶಸ್ವಿ ಆಗ್ತೀರ.—1ಪೇತ್ರ 5:10.
ನಂಬಿಕೆಗೋಸ್ಕರ ಹೋರಾಡುವ ಧೀರರು—ಅಪ್ಪ/ಅಮ್ಮ ಸತ್ಯದಲ್ಲಿ ಇಲ್ಲದಿದ್ದರೂ ಅನ್ನೋ ವಿಡಿಯೋ ನೋಡಿ, ಈ ಪ್ರಶ್ನೆಗಳಿಗೆ ಉತ್ರ ಕೊಡಿ:
-
ಟ್ಯಾಮಿ, ಚಾರ್ಲ್ಸ್ ಮತ್ತು ಜಿಮ್ಮಿಯಿಂದ ನೀವೇನು ಕಲಿತ್ರಿ?
-
ಕೀರ್ತನೆ 27:10ರಲ್ಲಿರೋ ಮಾತುಗಳು ಒಂಟಿ ಹೆತ್ತವರು ಇರೋರಿಗೆ ಹೇಗೆ ಸಾಂತ್ವನ ಕೊಡುತ್ತೆ?