ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಆರ್ಥಿಕ ಬಿಕ್ಕಟ್ಟನ್ನ ಎದುರಿಸೋಕೆ ನೀವು ರೆಡಿನಾ?

ಆರ್ಥಿಕ ಬಿಕ್ಕಟ್ಟನ್ನ ಎದುರಿಸೋಕೆ ನೀವು ರೆಡಿನಾ?

ಆರ್ಥಿಕ ಬಿಕ್ಕಟ್ಟು ಆದಾಗ ನಮಗೆ ಆಶ್ಚರ್ಯ ಆಗಲ್ಲ. ಯಾಕಂದ್ರೆ ನಾವು ಕೊನೇ ದಿನಗಳಲ್ಲಿ ಜೀವನ ಮಾಡ್ತಿದ್ದೀವಿ. “ಕಣ್ಮರೆ ಆಗೋ ಐಶ್ವರ್ಯವನ್ನ” ನಂಬಬಾರದು ಅಂತ ಬೈಬಲ್‌ ಎಚ್ಚರಿಕೆ ಕೊಡುತ್ತೆ. (1ತಿಮೊ 6:17; 2ತಿಮೊ 3:1) ಆರ್ಥಿಕ ಬಿಕ್ಕಟ್ಟು ಬರೋಕಿಂತ ಮುಂಚೆ ರೆಡಿಯಾಗಿರೋಕೆ ರಾಜ ಯೆಹೋಷಾಫಾಟನ ಉದಾಹರಣೆ ನಮಗೆ ಹೇಗೆ ಸಹಾಯ ಮಾಡುತ್ತೆ?

ಶತ್ರುಗಳಿಂದ ಬೆದರಿಕೆ ಬಂದಾಗ ಯೆಹೋಷಾಫಾಟ ಯೆಹೋವನ ಮೇಲೆ ಭರವಸೆಯಿಟ್ಟ. (2ಪೂರ್ವ 20:9-12) ತನ್ನ ಪಟ್ಟಣವನ್ನ ಮತ್ತು ಜನ್ರನ್ನ ಸುರಕ್ಷಿತವಾಗಿ ಇಡೋಕೆ ಮೊದ್ಲೇ ಬೇಕಾದ ಎಲ್ಲ ಕ್ರಮಗಳನ್ನ ಹಾಗೂ ಸೈನಿಕರನ್ನ ರೆಡಿ ಮಾಡಿದ. (2ಪೂರ್ವ 17:1, 2, 12, 13) ಮುಂದೆ ಬರೋ ಕಷ್ಟಗಳನ್ನ ಎದುರಿಸೋಕೆ ಯೆಹೋಷಾಫಾಟನ ತರ ನಾವೂ ಮುಂಚೆನೇ ರೆಡಿಯಾಗಿ ಇರಬೇಕು ಮತ್ತು ಯೆಹೋವನ ಮೇಲೆ ಭರವಸೆ ಇಡಬೇಕು.

ವಿಪತ್ತನ್ನ ಎದುರಿಸೋಕೆ ನೀವು ಸಿದ್ಧರಾಗಿದ್ದೀರಾ? ಅನ್ನೋ ವಿಡಿಯೋ ನೋಡಿ, ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ವಿಪತ್ತನ್ನ ಎದುರಿಸೋಕೆ ನೀವು ಹೇಗೆ ತಯಾರಿ ಮಾಡಬಹುದು?

  • ಬೇರೆಯವ್ರಿಗೆ ಸಹಾಯ ಮಾಡೋಕೆ ನೀವೇನು ಮಾಡಬಹುದು?