ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೇ 20-26

ಗೀತೆ 42 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಬೇರೆಯವರಿಗೆ ಯಾಕೆ ಸಹಾಯ ಮಾಡಬೇಕು?

(10 ನಿ.)

ಬೇರೆಯವರಿಗೆ ಸಹಾಯ ಮಾಡಿದ್ರೆ ಖುಷಿ ಸಿಗುತ್ತೆ (ಕೀರ್ತ 41:1; ಕಾವಲಿನಬುರುಜು18.08 ಪುಟ 22 ಪ್ಯಾರ 16-18)

ಬೇರೆಯವರಿಗೆ ಸಹಾಯ ಮಾಡಿದ್ರೆ ಯೆಹೋವ ನಮಗೆ ಸಹಾಯ ಮಾಡ್ತಾನೆ (ಕೀರ್ತ 41:2-4; ಕಾವಲಿನಬುರುಜು15 12/15 ಪುಟ 24 ಪ್ಯಾರ 7)

ಬೇರೆಯವರಿಗೆ ಸಹಾಯ ಮಾಡಿದ್ರೆ ಯೆಹೋವನಿಗೂ ಖುಷಿಯಾಗುತ್ತೆ (ಕೀರ್ತ 41:13; ಜ್ಞಾನೋ 14:31; ಕಾವಲಿನಬುರುಜು17.09 ಪುಟ 12 ಪ್ಯಾರ 17)

ನಿಮ್ಮನ್ನೇ ಕೇಳ್ಕೊಳ್ಳಿ, JW ಲೈಬ್ರರಿ ಆ್ಯಪ್‌ನ್ನ ಚೆನ್ನಾಗಿ ಬಳಸೋಕೆ ನನ್ನ ಸಭೆಯಲ್ಲಿ ಯಾರಿಗಾದ್ರೂ ಸಹಾಯ ಬೇಕಿದ್ಯಾ?

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 40:5-10—ಯೆಹೋವನೇ ವಿಶ್ವದ ರಾಜ ಅಂತ ಒಪ್ಕೊಳ್ಳೋಕೆ ದಾವೀದನ ಪ್ರಾರ್ಥನೆ ಹೇಗೆ ಸಹಾಯ ಮಾಡುತ್ತೆ? (it-2-E ಪುಟ 16)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಅನೌಪಚಾರಿಕ ಸಾಕ್ಷಿ: ಖುಷಿಯಾಗಿರೋ ಒಬ್ಬ ವ್ಯಕ್ತಿ ಜೊತೆ ಸಂಭಾಷಣೆ ಶುರುಮಾಡಿ. (ಪ್ರೀತಿಸಿ-ಕಲಿಸಿ ಪಾಠ 2 ಪಾಯಿಂಟ್‌ 3)

5. ಸಂಭಾಷಣೆ ಶುರುಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ: ಬೇಜಾರಲ್ಲಿರೋ ಒಬ್ಬ ವ್ಯಕ್ತಿ ಜೊತೆ ಸಂಭಾಷಣೆ ಶುರುಮಾಡಿ. (ಪ್ರೀತಿಸಿ-ಕಲಿಸಿ ಪಾಠ 3 ಪಾಯಿಂಟ್‌ 5)

6. ಶಿಷ್ಯರಾಗೋಕೆ ಕಲಿಸಿ

(5 ನಿ.) ಖುಷಿಯಾಗಿ ಬಾಳೋಣ ಪಾಠ 14 ಪಾಯಿಂಟ್‌ 6. “ಇದನ್ನೂ ನೋಡಿ” ಅನ್ನೋ ಭಾಗದಲ್ಲಿರೋ “ಸಭೆಯಲ್ಲಿ ಯೆಹೋವನನ್ನು ಸ್ತುತಿಸಿ” ಅನ್ನೋ ಲೇಖನದಿಂದ ಒಂದು ಪಾಯಿಂಟ್‌ ಚರ್ಚಿಸಿ. (ಪ್ರಗತಿ ಪಾಠ 19)

ನಮ್ಮ ಕ್ರೈಸ್ತ ಜೀವನ

ಗೀತೆ 90

7. ವಯಸ್ಸಾದವರಿಗೆ ಒಳ್ಳೇದು ಮಾಡೋಣ

(15 ನಿ.) ಚರ್ಚೆ.

ನಮ್ಮ ಸಭೆಯಲ್ಲಿರೋ ವಯಸ್ಸಾದವರು ಮಾಡೋ ಸೇವೆಯನ್ನ ಯೆಹೋವ ದೇವರು ಮತ್ತು ನಾವು ತುಂಬ ಮೆಚ್ಕೊಳ್ತೀವಿ. (ಇಬ್ರಿ 6:10) ಎಷ್ಟೋ ವರ್ಷಗಳಿಂದ ಇವರು ಬೇರೆಯವರಿಗೆ ಕಲಿಸ್ತಾ, ತರಬೇತಿ ಕೊಡ್ತಾ ಪ್ರೋತ್ಸಾಹಿಸಿದ್ದಾರೆ. ಬಹುಶಃ ಅವರು ನಿಮಗೆ ಮಾಡಿರೋ ಸಹಾಯ ಇವತ್ತಿಗೂ ನೆನಪಿರಬಹುದು. ಅವರು ಇಲ್ಲಿ ತನಕ ಮಾಡಿರೋ ಮತ್ತು ಮುಂದಕ್ಕೂ ಮಾಡೋ ವಿಷಯಗಳಿಗೆ ನಾವು ಹೇಗೆ ಪ್ರೀತಿ ತೋರಿಸಬಹುದು?

‘ನಮ್ಮ ಸಹೋದರರಿಗೆ ಒಳ್ಳೇದನ್ನ ಮಾಡೋಣ’ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ಸಹೋದರ ಓ-ಜಿನ್‌ ಕಾಂಗ್‌ರವರಿಂದ ಜೀ-ಹೂನ್‌ ಏನು ಕಲಿತ?

  • ನಿಮ್ಮ ಸಭೆಯಲ್ಲಿರೋ ವಯಸ್ಸಾದವರಲ್ಲಿ ನಿಮಗೆ ಏನು ಇಷ್ಟ?

  • ಸಮಾರ್ಯದವನಿಂದ ನಾವೇನು ಕಲಿಬಹುದು?

  • ಸಹೋದರ ಓ-ಜಿನ್‌ ಕಾಂಗ್‌ಗೆ ಸಹಾಯ ಮಾಡೋಕೆ ಜೀ-ಹೂನ್‌ ಬೇರೆಯವರನ್ನ ಕರಕೊಂಡು ಹೋಗಿದ್ದು ಯಾಕೆ ಒಳ್ಳೇದಾಯ್ತು?

ನಮ್ಮ ಸಭೆಯಲ್ಲಿರೋ ವಯಸ್ಸಾದವರ ಬಗ್ಗೆ ಯೋಚನೆ ಮಾಡಿದಾಗ ಅವರಿಗೆ ಏನಾದ್ರೂ ಸಹಾಯ ಬೇಕಾ ಅಂತ ಗೊತ್ತಾಗುತ್ತೆ. ಒಂದುವೇಳೆ ಅವರಿಗೆ ಏನಾದ್ರೂ ಸಹಾಯ ಬೇಕು ಅಂತ ಗೊತ್ತಾದ್ರೆ ದಯವಿಟ್ಟು ಮುಂದೆ ಹೋಗಿ ಮಾಡಿ.—ಯಾಕೋ 2:15, 16.

ಗಲಾತ್ಯ 6:10 ಓದಿ. ಆಮೇಲೆ ಈ ಪ್ರಶ್ನೆ ಕೇಳಿ:

  • ಸಭೆಯಲ್ಲಿರೋ ವಯಸ್ಸಾದವರಿಗೆ ‘ಒಳ್ಳೇದು ಮಾಡೋಕೆ’ ನಾವೇನು ಮಾಡಬೇಕು?

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 49 ಮತ್ತು ಪ್ರಾರ್ಥನೆ