ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೇ 27–ಜೂನ್‌ 2

ಕೀರ್ತನೆ 42-44

ಮೇ 27–ಜೂನ್‌ 2

ಗೀತೆ 117 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಯೆಹೋವನ ಮಾತನ್ನ ಕೇಳಿ, ಪಾಲಿಸಿ

(10 ನಿ.)

ನಿಮ್ಮ ಕೈಲಾದಗೆಲ್ಲ ನೇರವಾಗಿ ಎಲ್ಲರ ಜೊತೆ ಸೇರಿ ಯೆಹೋವನನ್ನ ಆರಾಧಿಸಿ (ಕೀರ್ತ 42:4, 5; ಕಾವಲಿನಬುರುಜು06 6/1 ಪುಟ 9 ಪ್ಯಾರ 4)

ಬೈಬಲ್‌ ಓದೋ ಮುಂಚೆ ಪ್ರಾರ್ಥನೆ ಮಾಡಿ (ಕೀರ್ತ 42:8; ಕಾವಲಿನಬುರುಜು12 1/15 ಪುಟ 15 ಪ್ಯಾರ 2)

ನೀವು ಜೀವನದಲ್ಲಿ ಇಡೋ ಪ್ರತಿ ಹೆಜ್ಜೆಗೂ ಬೈಬಲ್‌ ದಾರಿದೀಪ ಆಗಿರಲಿ (ಕೀರ್ತ 43:3)

ಯೆಹೋವನ ಮಾತನ್ನ ಪಾಲಿಸಿದ್ರೆ ಕಷ್ಟ ಬಂದ್ರೂ ತಾಳ್ಕೊಳ್ತೀವಿ, ಕೊನೆ ತನಕ ಆತನ ಸೇವೆ ಮಾಡ್ತೀವಿ.—1ಪೇತ್ರ 5:10; ಕಾವಲಿನಬುರುಜು16.09 ಪುಟ 5-6 ಪ್ಯಾರ 11-12.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 44:19—“ಗುಳ್ಳೆನರಿ ವಾಸಿಸೋ ಜಾಗ” ಅಂದ್ರೇನು? (it-1-E ಪುಟ 1242)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(4 ನಿ.) ಮನೆ-ಮನೆ ಸೇವೆ: ಬೈಬಲ್‌ ಸ್ಟಡಿ ಬಗ್ಗೆ ಹೇಳಿ. (ಪ್ರೀತಿಸಿ-ಕಲಿಸಿ ಪಾಠ 5 ಪಾಯಿಂಟ್‌ 5)

5. ಮತ್ತೆ ಭೇಟಿ ಮಾಡಿ

(5 ನಿ.) ಮನೆ-ಮನೆ ಸೇವೆ: ಮುಂದಿನ ವಾರದ ಸಾರ್ವಜನಿಕ ಭಾಷಣಕ್ಕೆ ಕರೀರಿ. ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ಅನ್ನೋ ವಿಡಿಯೋವನ್ನ ಪರಿಚಯಿಸಿ, ಚರ್ಚಿಸಿ. (ಆದ್ರೆ ಪ್ಲೇ ಮಾಡಬೇಡಿ) (ಪ್ರೀತಿಸಿ-ಕಲಿಸಿ ಪಾಠ 7 ಪಾಯಿಂಟ್‌ 5)

6. ಭಾಷಣ

(3 ನಿ.) ಪ್ರೀತಿಸಿ-ಕಲಿಸಿ ಪರಿಶಿಷ್ಟ ಎ ಪಾಯಿಂಟ್‌ 4—ವಿಷ್ಯ: ಎಲ್ರಿಗೂ ಒಳ್ಳೇ ಆರೋಗ್ಯ ಇರುತ್ತೆ. (ಪ್ರಗತಿ ಪಾಠ 2)

ನಮ್ಮ ಕ್ರೈಸ್ತ ಜೀವನ

ಗೀತೆ 40

7. ಕೆಲಸ ಮತ್ತು ವಿದ್ಯಾಭ್ಯಾಸದ ಬಗ್ಗೆ ಒಳ್ಳೇ ತೀರ್ಮಾನ ಮಾಡಿ

(15 ನಿ.) ಚರ್ಚೆ.

ಯುವಜನರೇ ಹೈಸ್ಕೂಲ್‌ ಆದಮೇಲೆ ಏನು ಮಾಡಬೇಕು ಅಂತ ಯೋಚಿಸ್ತಿದ್ದೀರಾ? ಪಯನೀಯರ್‌ ಸೇವೆ ಮಾಡೋಕೆ ಸಹಾಯ ಆಗೋ ಯಾವುದಾದ್ರೂ ಕೆಲಸದ ಬಗ್ಗೆ ನೀವು ಈಗಾಗಲೇ ಯೋಚಿಸ್ತಿರಬಹುದು ಅಥವಾ ಒಂದು ಕೌಶಲ ಕಲಿಯೋಕೆ, ಯಾವುದಾದ್ರೂ ಕೋರ್ಸ್‌ ಮಾಡಿ ಸರ್ಟಿಫಿಕೆಟ್‌ ಪಡ್ಕೊಳ್ಳೋಕೆ ಯೋಚನೆ ಮಾಡ್ತಿರಬಹುದು. ಆ ಸಮಯದಲ್ಲಿ ನಿಮಗೆ ಇಷ್ಟ ಇರೋದನ್ನ ಮಾಡಬೇಕಾ ಅಥವಾ ಬೇರೆಯವರು ಹೇಳೋದನ್ನ ಮಾಡಬೇಕಾ ಅಂತಾನೇ ಗೊತ್ತಾಗಲ್ಲ. ಹೀಗಿರುವಾಗ ಒಳ್ಳೇ ತೀರ್ಮಾನ ಮಾಡೋಕೆ ನಿಮಗೆ ಯಾವುದು ಸಹಾಯ ಮಾಡುತ್ತೆ?

ಮತ್ತಾಯ 6:32, 33 ಓದಿ. ಆಮೇಲೆ ಹೀಗೆ ಕೇಳಿ:

  • ಕೆಲಸ ಮತ್ತು ವಿದ್ಯಾಭ್ಯಾಸದ ಬಗ್ಗೆ ಏನಾದ್ರೂ ಒಂದು ತೀರ್ಮಾನ ಮಾಡೋ ಮುಂಚೆ ಯೆಹೋವನ ಸೇವೆಯಲ್ಲಿ ಏನು ಮಾಡಬೇಕು ಅಂತ ಗುರಿ ಇಡೋದು ಯಾಕೆ ಮುಖ್ಯ?

  • ಮತ್ತಾಯ 6:32, 33ರಲ್ಲಿರೋ ಮಾತನ್ನ ಮಕ್ಕಳು ಪಾಲಿಸೋಕೆ ಹೆತ್ತವರು ಏನು ಮಾಡಬೇಕು?—ಕೀರ್ತ 78:4-7

ಹಣ ಮಾಡಬೇಕು, ಜೀವನದಲ್ಲಿ ಹಾಯಾಗಿರಬೇಕು ಮತ್ತು ಹೆಸರು ಮಾಡಬೇಕು ಅನ್ನೋ ಆಸೆ ನಿಮ್ಮ ತೀರ್ಮಾನಗಳಿಗೆ ಆಡ್ಡಿಯಾಗದೇ ಇರೋ ತರ ನೋಡ್ಕೊಳಿ. (1ಯೋಹಾ 2:15, 17) ಒಬ್ಬ ವ್ಯಕ್ತಿ ಹತ್ತಿರ ತುಂಬ ಹಣ ಇದ್ದರೆ ಅವನು ದೇವರ ಆಳ್ವಿಕೆ ಬಗ್ಗೆ ಕಲಿತು ಅದನ್ನ ಒಪ್ಕೊಳ್ಳೋಕೆ ತುಂಬ ಕಷ್ಟ ಆಗುತ್ತೆ. (ಲೂಕ 18:24-27) ಒಬ್ಬ ವ್ಯಕ್ತಿ ಹಣ ಆಸ್ತಿ ಮಾಡೋದ್ರಲ್ಲೇ ಮುಳುಗಿ ಹೋಗುವಾಗ ಅವನಿಗೆ ಯೆಹೋವನ ಮೇಲೆ ನಂಬಿಕೆ ಬೆಳೆಸಿಕೊಳ್ಳೋಕೆ ಕಷ್ಟ ಆಗುತ್ತೆ, ಆತನನ್ನ ಖುಷಿಪಡಿಸೋದೂ ಕಷ್ಟ ಆಗುತ್ತೆ.—ಮತ್ತಾ 6:24; ಮಾರ್ಕ 8:36.

ಶಾಶ್ವತವಲ್ಲದ ವಿಷಯಗಳ ಮೇಲೆ ಭರವಸೆ ಇಡಬೇಡಿ!—ಐಶ್ವರ್ಯ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  •   ಜ್ಞಾನೋಕ್ತಿ 23:4, 5 ವಿವೇಕದಿಂದ ತೀರ್ಮಾನ ಮಾಡೋಕೆ ಹೇಗೆ ಸಹಾಯ ಮಾಡುತ್ತೆ?

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 67 ಮತ್ತು ಪ್ರಾರ್ಥನೆ