ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೇ 6-12

ಗೀತೆ 119 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. “ಕೆಟ್ಟವರನ್ನ ನೋಡಿ ನೆಮ್ಮದಿ ಕಳ್ಕೊಬೇಡ”

(10 ನಿ.)

ಕೆಟ್ಟವರು ನಮಗೆ ತುಂಬ ನೋವು, ಕಷ್ಟ ಕೊಡ್ತಾರೆ (ಕೀರ್ತ 36:1-4; ಕಾವಲಿನಬುರುಜು17.04 ಪುಟ 10 ಪ್ಯಾರ 4)

“ಕೆಟ್ಟವರ” ಮೇಲೆ ಕೋಪ ಇಟ್ಕೊಂಡ್ರೆ ನಮಗೂ ಹಾನಿಯಾಗುತ್ತೆ (ಕೀರ್ತ 37:1, 7, 8; ಕಾವಲಿನಬುರುಜು22.06 ಪುಟ 10 ಪ್ಯಾರ 10)

ಯೆಹೋವನ ಮಾತನ್ನ ನಂಬಿದ್ರೆ ಶಾಂತಿಯಿಂದ ಇರ್ತೀವಿ (ಕೀರ್ತ 37:10, 11; ಕಾವಲಿನಬುರುಜು03 12/1 ಪುಟ 14 ಪ್ಯಾರ 20)

ನಿಮ್ಮನ್ನೇ ಕೇಳ್ಕೊಳ್ಳಿ, ‘ಹಿಂಸೆ ಮತ್ತು ಜಗಳಗಳ ಬಗ್ಗೆ ಮಾಧ್ಯಮಗಳಲ್ಲಿ ಬಂದಾಗ ನಾನು ಅದನ್ನೇ ನೋಡ್ತಾ, ಅದ್ರ ಬಗ್ಗೆನೇ ಯೋಚನೆ ಮಾಡ್ತಾ ಇರ್ತೀನಾ?’

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 36:6—ಯೆಹೋವನ ನೀತಿಯನ್ನ “ವೈಭವದಿಂದ ತುಂಬಿರೋ ಬೆಟ್ಟ [ಅಥವಾ “ದೇವರ ಬೆಟ್ಟ,” ಪಾದಟಿಪ್ಪಣಿ]” ಅಂತ ಕೀರ್ತನೆಗಾರ ಹೇಳಿದ್ರ ಅರ್ಥ ಏನು? (it-2-E ಪುಟ 445)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

5. ಮತ್ತೆ ಭೇಟಿ ಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ: ಹಿಂದೆ ಬೈಬಲ್‌ ಸ್ಟಡಿ ಬೇಡ ಅಂತ ಹೇಳಿದ ವ್ಯಕ್ತಿ ಹತ್ರ ಇನ್ನೊಮ್ಮೆ ಸ್ಟಡಿ ಮಾಡಬಹುದಾ ಅಂತ ಕೇಳಿ. (ಪ್ರೀತಿಸಿ-ಕಲಿಸಿ ಪಾಠ 9 ಪಾಯಿಂಟ್‌ 4)

6. ಭಾಷಣ

(5 ನಿ.) ijwbv ಲೇಖನ 45—ವಿಷ್ಯ: ಕೀರ್ತನೆ 37:4ರ ಅರ್ಥ ಏನು? (ಪ್ರಗತಿ ಪಾಠ 13)

ನಮ್ಮ ಕ್ರೈಸ್ತ ಜೀವನ

ಗೀತೆ 38

7. ‘ಕಷ್ಟದ ಸಮಯವನ್ನ’ ಎದುರಿಸೋಕೆ ನೀವು ರೆಡೀನಾ?

(15 ನಿ.) ಚರ್ಚೆ.

ನೈಸರ್ಗಿಕ ವಿಪತ್ತಿಂದ ಮತ್ತು ಮನುಷ್ಯರು ಮಾಡೋ ಹಾನಿಯಿಂದ ಇಡೀ ಲೋಕದಲ್ಲಿರೋ ನಮ್ಮ ಸಹೋದರ ಸಹೋದರಿಯರು ತುಂಬ ಕಷ್ಟ ಅನುಭವಿಸ್ತಿದ್ದಾರೆ. (ಕೀರ್ತ 9:9, 10) “ಕಷ್ಟದ ಸಮಯ” ಯಾವಾಗ ಬೇಕಾದ್ರೂ ಬರಬಹುದು. ಹಾಗಾಗಿ ನಾವು ಮುಂಚೆನೇ ತಯಾರಾಗಿರಬೇಕು.

ವಿಪತ್ತನ್ನ ಎದುರಿಸೋಕೆ ನಾವು ಸಿದ್ಧತೆ ಮಾಡಿದ್ರೂ a ಬೇರೆ ಯಾವ ವಿಷಯಗಳು ನಮಗೆ ಸಹಾಯ ಮಾಡುತ್ತೆ?

  • ಮನಸ್ಸನ್ನ ಸಿದ್ಧಮಾಡ್ಕೊಳ್ಳಿ: ವಿಪತ್ತುಗಳು ಬರೋದೇ ಇಲ್ಲ ಅಂದ್ಕೊಂಡು ಮೋಸ ಹೋಗಬೇಡಿ, ಅದನ್ನ ಎದುರಿಸೋಕೆ ಬೇಕಾದ ತಯಾರಿ ಮಾಡಿ. ಹಣ ಆಸ್ತಿನೇ ಸರ್ವಸ್ವ ಅಂದ್ಕೊಬೇಡಿ. ಆಗ ಮಾತ್ರ ನಮ್ಮ ಜೀವ ಉಳಿಯುತ್ತೆ. (ಆದಿ 19:16; ಕೀರ್ತ 36:9) ಒಂದುವೇಳೆ ವಿಪತ್ತಿನಲ್ಲಿ ನಮ್ಮ ಹಣ ಆಸ್ತಿನೆಲ್ಲಾ ಕಳ್ಕೊಂಡ್ರೂ ನಾವು ದುಃಖದಲ್ಲಿ ಮುಳುಗಿಹೋಗಲ್ಲ.—ಕೀರ್ತ 37:19.

  • ನಂಬಿಕೆ ಗಟ್ಟಿಮಾಡಿಕೊಳ್ಳಿ: ನಮ್ಮನ್ನ ಚೆನ್ನಾಗಿ ನೋಡ್ಕೊಳ್ಳೋ ಆಸೆ ಮತ್ತು ಸಾಮರ್ಥ್ಯ ಯೆಹೋವನಿಗಿದೆ ಅಂತ ನಂಬಿ. (ಕೀರ್ತ 37:18) ಯೆಹೋವ ತನ್ನ ಸೇವಕರಿಗೆ ಸಹಾಯ ಮಾಡ್ತಾನೆ, ಅವರನ್ನ ನಡೆಸ್ತಾನೆ ಅಂತ ಯಾವಾಗಲೂ ನೆನಪಲ್ಲಿಟ್ಕೊಳ್ಳಿ. ಹೀಗೆ ಮಾಡಿದ್ರೆ ಒಂದುವೇಳೆ ವಿಪತ್ತಿನ ನಂತರ ‘ಜೀವ ಮಾತ್ರ ನಿಮಗೆ ಕೊಳ್ಳೆಯಾಗಿ’ ಸಿಕ್ಕಿದ್ರೂ ಯೆಹೋವ ನಮ್ಮನ್ನ ಕಾದು ಕಾಪಾಡ್ತಾನೆ ಅಂತ ನಂಬೋಕೆ ಆಗುತ್ತೆ.—ಯೆರೆ 45:5; ಕೀರ್ತ 37:23, 24.

ಕೊಟ್ಟಿರೋ ಮಾತನ್ನ ಯೆಹೋವ ಖಂಡಿತ ನೆರವೇರಿಸ್ತಾನೆ ಅನ್ನೋ ಭರವಸೆ ನಮಗಿದ್ರೆ ‘ಕಷ್ಟಕಾಲದಲ್ಲಿ ಆತನೇ ನಮ್ಮ ಭದ್ರಕೋಟೆ’ ಆಗ್ತಾನೆ.—ಕೀರ್ತ 37:39.

ವಿಪತ್ತನ್ನ ಎದುರಿಸೋಕೆ ನೀವು ಸಿದ್ಧರಾಗಿದ್ದೀರಾ? ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ವಿಪತ್ತಿನ ಸಮಯದಲ್ಲಿ ಯೆಹೋವ ಹೇಗೆ ಸಹಾಯ ಮಾಡ್ತಾನೆ?

  • ವಿಪತ್ತು ಬರೋ ಮುಂಚೆ ನಾವು ಏನು ಮಾಡಬಹುದು?

  • ವಿಪತ್ತಿಗೆ ತುತ್ತಾದವರಿಗೆ ನಾವು ಹೇಗೆ ಸಹಾಯ ಮಾಡಬಹುದು?

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 142 ಮತ್ತು ಪ್ರಾರ್ಥನೆ