ಮೇ 2-8
ಯೋಬ 38-42
ಗೀತೆ 63 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನಾವು ಇತರರಿಗಾಗಿ ಪ್ರಾರ್ಥಿಸಿದರೆ ಯೆಹೋವನು ಮೆಚ್ಚುತ್ತಾನೆ”: (10 ನಿ.)
ಯೋಬ 42:7, 8—ಎಲೀಫಜ, ಬಿಲ್ದದ ಮತ್ತು ಚೋಫರರಿಗಾಗಿ ಪ್ರಾರ್ಥಿಸುವಂತೆ ಯೆಹೋವ ದೇವರು ಯೋಬನಿಗೆ ತಿಳಿಸಿದನು (ಕಾವಲಿನಬುರುಜು 13 6/15 ಪು. 21, ಪ್ಯಾ. 17; ಕಾವಲಿನಬುರುಜು 98 5/1 ಪು. 30, ಪ್ಯಾ. 3-6)
ಯೋಬ 42:10—ಯೋಬನು ತನ್ನ ಸ್ನೇಹಿತರಿಗಾಗಿ ಪ್ರಾರ್ಥಿಸಿದ ನಂತರ ಯೆಹೋವನು ಯೋಬನ ಆರೋಗ್ಯವನ್ನು ಪುನಃ ಕೊಟ್ಟನು, ಕಾಯಿಲೆ ವಾಸಿ ಮಾಡಿದನು (ಕಾವಲಿನಬುರುಜು 98 5/1 ಪು. 31, ಪ್ಯಾ. 3)
ಯೋಬ 42:10-17—ನಂಬಿಕೆ ಮತ್ತು ತಾಳ್ಮೆ ತೋರಿಸಿದ್ದಕ್ಕಾಗಿ ಯೆಹೋವನು ಯೋಬನನ್ನು ಹೇರಳವಾಗಿ ಆಶೀರ್ವದಿಸಿದನು (ಕಾವಲಿನಬುರುಜು 94 11/15 ಪು. 20, ಪ್ಯಾ. 19-20)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೋಬ 38:4-7—“ಮುಂಜಾನೆ ನಕ್ಷತ್ರಗಳು” ಯಾರು ಮತ್ತು ಅವರ ಬಗ್ಗೆ ನಮಗೆ ಏನು ತಿಳಿದಿದೆ? (ಬೈಬಲ್ ಬೋಧಿಸುತ್ತದೆ ಪು. 97, ಪ್ಯಾ. 3)
ಯೋಬ 42:3-5—ಯೋಬನಂತೆ ನಾವು ದೇವರನ್ನು ನೋಡಲು ಏನು ಮಾಡಬೇಕು? (ಕಾವಲಿನಬುರುಜು 15 10/15 ಪು. 8, ಪ್ಯಾ. 16-17)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೋಬ 41:1-26
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. ಪ್ರತಿಯೊಂದು ಮಾದರಿ ನಿರೂಪಣೆಯ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ಪ್ರಚಾರಕರು ಸಾರಲು ತಮ್ಮ ಎಲೆಕ್ಟ್ರಾನಿಕ್ ಸಾಧನಗಳನ್ನು ಹೇಗೆ ಉಪಯೋಗಿಸಿದ್ದಾರೆ ಎಂದು ಚರ್ಚಿಸುವಾಗ “JW ಲೈಬ್ರರಿ ಯನ್ನು ಉಪಯೋಗಿಸುವ ವಿಧಾನಗಳು” ಎಂಬ ಲೇಖನದಲ್ಲಿರುವ ಅಂಶಗಳನ್ನು ಚುಟುಕಾಗಿ ತಿಳಿಸಿ. ವಿಡಿಯೋಗಳನ್ನು ಎಷ್ಟು ಬಾರಿ ತೋರಿಸಿರುತ್ತಾರೋ ಅದನ್ನು ಪ್ರತಿ ತಿಂಗಳ ಕೊನೆಯಲ್ಲಿ ವರದಿ ಮಾಡುವಂತೆ ಸಭಿಕರಿಗೆ ನೆನಪು ಹುಟ್ಟಿಸಿ. ತಮ್ಮ ಸ್ವಂತ ನಿರೂಪಣೆಗಳನ್ನು ಬರೆಯುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.
ನಮ್ಮ ಕ್ರೈಸ್ತ ಜೀವನ
“JW ಲೈಬ್ರರಿಯನ್ನು ಉಪಯೋಗಿಸುತ್ತಿದ್ದೀರಾ?”: (15 ನಿ.) ಚರ್ಚೆ. 5 ನಿಮಿಷ ಲೇಖನವನ್ನು ಚರ್ಚಿಸಿ. ನಂತರ “JW ಲೈಬ್ರರಿ” ಯನ್ನು ಉಪಯೋಗಿಸಿ ಎಂಬ ವಿಡಿಯೋವನ್ನು ಹಾಕಿ ಚುಟುಕಾಗಿ ಚರ್ಚಿಸಿ. ನಂತರ ಪ್ರಕಾಶನಗಳನ್ನು ಡೌನ್‌ಲೋಡ್ ಮಾಡಿ ಸರಿಯಾಗಿ ಉಪಯೋಗಿಸಿ ಮತ್ತು ಸುಲಭವಾಗಿ ಓದುವ ಸೆಟ್ಟಿಂಗ್ಸ್ ಮಾಡಿಕೊಳ್ಳಿ ಎಂಬ ವಿಡಿಯೋಗಳನ್ನೂ ಹಾಕಿ ಚರ್ಚಿಸಿ. ಮೇ 16 ರ ವಾರದಲ್ಲಿ “JW ಲೈಬ್ರರಿ ಯನ್ನು ಉಪಯೋಗಿಸುವ ವಿಧಾನಗಳು” ಎಂಬ ಲೇಖನವನ್ನು ಚರ್ಚಿಸಲಾಗುವ ಮುಂಚೆ ಸಾಧ್ಯವಿರುವವರೆಲ್ಲರೂ ತಮ್ಮ ಎಲೆಕ್ಟ್ರಾನಿಕ್ ಸಾಧನಗಳಿಗೆ “JW ಲೈಬ್ರರಿ” ಆ್ಯಪ್ ಹಾಕಿಕೊಳ್ಳುವಂತೆ ಪ್ರೋತ್ಸಾಹಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಬೈಬಲ್ ಕಥೆಗಳು, ಕಥೆ 113
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 98 ಮತ್ತು ಪ್ರಾರ್ಥನೆ