ನಮ್ಮ ಕ್ರೈಸ್ತ ಜೀವನ
JW ಲೈಬ್ರರಿಯನ್ನು ಉಪಯೋಗಿಸುತ್ತಿದ್ದೀರಾ?
ಇದೊಂದು ಫ್ರೀ ಆ್ಯಪ್ (ಸಾಫ್ಟ್‌ವೇರ್ ಆ್ಯಪ್ಲಿಕೇಷನ್) ಆಗಿದೆ. ಇದರಿಂದ ನಿಮ್ಮ ಮೊಬೈಲ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ಗಳಿಗೆ ಪ್ರಕಾಶನಗಳು, ಬೈಬಲ್, ವಿಡಿಯೋ ಮತ್ತು ಆಡಿಯೋ ಪ್ರೋಗ್ರಾಮ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಹೇಗೆ ಸಿಗುತ್ತದೆ? ಆನ್‌ಲೈನ್‌ಗೆ ಹೋಗಿ ಆ್ಯಪ್ ಸ್ಟೋರ್‌ನಿಂದ JW ಲೈಬ್ರರಿ ಯನ್ನು ಹಾಕಿಕೊಳ್ಳಬಹುದು. ಈ ಆ್ಯಪನ್ನು ಅನೇಕ ರೀತಿಯ ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಹಾಕಿ ಬಳಸಬಹುದು. ಆನ್‌ಲೈನಲ್ಲಿರುವಾಗಲೇ ಆ್ಯಪನ್ನು ತೆರೆದು ಅಲ್ಲಿಂದ ನಿಮಗೆ ಬೇಕಾದದ್ದನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಒಂದುವೇಳೆ ನಿಮ್ಮ ಮನೆಯಲ್ಲಿ ಇಂಟರ್‌ನೆಟ್ ಸೌಲಭ್ಯ ಇಲ್ಲದಿದ್ದರೆ ಇಂಟರ್‌ನೆಟ್ ಸೌಲಭ್ಯವಿರುವಲ್ಲಿಗೆ ಅಂದರೆ ರಾಜ್ಯ ಸಭಾಗೃಹದಲ್ಲೋ, ಸಾರ್ವಜನಿಕ ಗ್ರಂಥಾಲಯದಲ್ಲೋ ಅಥವಾ ಈ ರೀತಿ ಸೌಲಭ್ಯ ಒದಗಿಸುವ ಹೋಟೆಲ್‌ಗಳಲ್ಲೋ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪ್ರಕಾಶನಗಳನ್ನು ಒಮ್ಮೆ ಡೌನ್‌ಲೋಡ್ ಮಾಡಿಕೊಂಡ ಮೇಲೆ ಅವುಗಳನ್ನು ಉಪಯೋಗಿಸಲು ಇಂಟರ್‌ನೆಟ್ ಬೇಕಾಗಿರುವುದಿಲ್ಲ. JW ಲೈಬ್ರರಿ ಗೆ ಹೊಸ ಹೊಸ ವಿಷಯಗಳನ್ನು ಆಗಾಗ್ಗೆ ಸೇರಿಸಲಾಗುವುದರಿಂದ ನೀವು ಆ್ಯಪನ್ನು ಆಗಾಗ್ಗೆ ಅಪ್‌ಡೇಟ್ ಮಾಡುತ್ತಾ ಇರಬೇಕಾಗುತ್ತದೆ.
ಏನು ಉಪಯೋಗ? ವೈಯಕ್ತಿಕ ಅಧ್ಯಯನ ಮಾಡಲು ಮತ್ತು ಸಭಾ ಕೂಟಗಳಲ್ಲಿ JW ಲೈಬ್ರರಿ ತುಂಬ ಉಪಯುಕ್ತ. ಅಲ್ಲದೆ, ಸುವಾರ್ತೆ ಸಾರುವಾಗ, ಅದರಲ್ಲೂ ಮುಖ್ಯವಾಗಿ ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಇದು ತುಂಬ ಉಪಯುಕ್ತ.