ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

JW ಲೈಬ್ರರಿಯನ್ನು ಉಪಯೋಗಿಸುವ ವಿಧಾನಗಳು

JW ಲೈಬ್ರರಿಯನ್ನು ಉಪಯೋಗಿಸುವ ವಿಧಾನಗಳು

ಅಧ್ಯಯನದಲ್ಲಿ:

  • ಬೈಬಲ್‌ ಮತ್ತು ದಿನದ ವಚನವನ್ನು ಓದಿ

  • ಯಿಯರ್‌ಬುಕ್‌, ಪತ್ರಿಕೆಗಳು ಮತ್ತು ಇತರ ಸಾಹಿತ್ಯವನ್ನು ಓದಿ. ಬುಕ್‌ಮಾರ್ಕ್‌ ಎಂಬ ವೈಶಿಷ್ಟ್ಯವನ್ನು ಉಪಯೋಗಿಸಿ

  • ಕೂಟಗಳಿಗಾಗಿ ತಯಾರಿ ಮಾಡಿ ಮತ್ತು ಉತ್ತರಗಳಿಗೆ ಗುರುತು ಹಾಕಿ

  • ವಿಡಿಯೋಗಳನ್ನು ನೋಡಿ

ಕೂಟದಲ್ಲಿ:

  • ವೇದಿಕೆಯಿಂದ ತಿಳಿಸಲಾದ ವಚನಗಳನ್ನು ತೆರೆದು ನೋಡಿ. ಈ ಹಿಂದೆ ತೆರೆದ ವಚನವನ್ನು ಪುನಃ ತೆರೆಯಲು ಹಿಸ್ಟರಿ ಎಂಬ ವೈಶಿಷ್ಟ್ಯವನ್ನು ಉಪಯೋಗಿಸಿ

  • ಕೂಟಗಳಿಗೆ ಬೇಕಾದ ಮುದ್ರಿತ ಸಾಹಿತ್ಯವನ್ನು ಹೊತ್ತು ತರುವ ಬದಲು ನಿಮ್ಮ ಎಲೆಕ್ಟ್ರಾನಿಕ್‌ ಸಾಧನವನ್ನು ಬಳಸಿ. ಹಾಡುಗಳನ್ನು ಹಾಡಲು ಸಹ ಹೀಗೆ ಮಾಡಬಹುದು. ಗೀತೆ ಪುಸ್ತಕದಲ್ಲಿ ಇಲ್ಲದ ಹೊಸ ಹಾಡುಗಳು ಸಹ JW ಲೈಬ್ರರಿ ಯಲ್ಲಿ ಇವೆ

ಸೇವೆಯಲ್ಲಿ:

  • ಆಸಕ್ತ ವ್ಯಕ್ತಿಗೆ JW ಲೈಬ್ರರಿ ಯಿಂದ ಏನನ್ನಾದರೂ ತೋರಿಸಿ. ಈ ಆ್ಯಪ್‌ ಮತ್ತು ಸಾಹಿತ್ಯವನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅವನಿಗೆ ಸಹಾಯ ಮಾಡಿ

  • ಬೈಬಲ್‌ ವಚನವನ್ನು ಬೇಗನೆ ಕಂಡುಕೊಳ್ಳಲು ಸರ್ಚ್‌ (ಹುಡುಕಿ) ಎಂಬ ವೈಶಿಷ್ಟ್ಯವನ್ನು ಉಪಯೋಗಿಸಿ. ಯಾವುದಾದರೊಂದು ಪದ ನೂತನ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿಯಲ್ಲಿ ಸಿಗದಿದ್ದರೆ, ರೆಫರೆನ್ಸ್‌ ಬೈಬಲ್‌ಗೆ ಹೋಗಿ ಪುನಃ ಹುಡುಕಿ

  • ವಿಡಿಯೋ ತೋರಿಸಿ. ಮನೆಯವರಿಗೆ ಮಕ್ಕಳಿದ್ದರೆ, ಯೆಹೋವ ದೇವರ ಗೆಳೆಯರಾಗೋಣ ವಿಡಿಯೋಗಳಲ್ಲಿ ಒಂದನ್ನು ತೋರಿಸಬಹುದು. ಅಲ್ಲದೆ, ಬೈಬಲ್‌ ಅಧ್ಯಯನದ ಕಡೆಗೆ ಆಸಕ್ತಿ ಹುಟ್ಟಿಸಲು ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ವಿಡಿಯೋ ಸಹ ತೋರಿಸಬಹುದು. ಬೇರೊಂದು ಭಾಷೆಯವರು ಸಿಕ್ಕಿದರೆ ಅವರ ಭಾಷೆಯಲ್ಲೇ ವಿಡಿಯೋ ತೋರಿಸಿ

  • ನೀವು ಈಗಾಗಲೇ ಡೌನ್‌ಲೋಡ್‌ ಮಾಡಿದ ಬೇರೆ ಭಾಷೆಯ ಭಾಷಾಂತರದಲ್ಲಿ ವಚನವನ್ನು ತೋರಿಸಿ. ಇತರ ಬೈಬಲ್‌ ಭಾಷಾಂತರಗಳನ್ನು ನೋಡಲು ನಿಮಗೆ ಬೇಕಿರುವ ವಚನಕ್ಕೆ ಹೋಗಿ ವಚನದ ಸಂಖ್ಯೆಯನ್ನು ಮುಟ್ಟಿ, ನಂತರ ಸಮಾನಾಂತರ ಭಾಷಾಂತರಗಳನ್ನು ತೋರಿಸುವ ಚಿಹ್ನೆಯನ್ನು ಮುಟ್ಟಿ