ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಮೇ 2018
ಮಾದರಿ ಸಂಭಾಷಣೆಗಳು
ಮಾನವರು ಮತ್ತು ಭೂಮಿಗಾಗಿ ಯಾವ ಭವಿಷ್ಯ ಇದೆ ಅನ್ನುವುದರ ಬಗ್ಗೆ ಸರಣಿ ಸಂಭಾಷಣೆಗಳು.
ಬೈಬಲಿನಲ್ಲಿರುವ ರತ್ನಗಳು
ನಿನ್ನ ಯಾತನಾ ಕಂಬವನ್ನು ಹೊತ್ತುಕೊಂಡು ಎಡೆಬಿಡದೆ ನನ್ನನ್ನು ಹಿಂಬಾಲಿಸು
ಪ್ರಾರ್ಥನೆ, ಬೈಬಲ್ ಅಧ್ಯಯನ, ಸೇವೆ ಮತ್ತು ಕೂಟದ ಹಾಜರಿಯ ವಿಷಯಕ್ಕೆ ಬರುವಾಗ ನಾವು ಯಾಕೆ ಇವನ್ನೆಲ್ಲಾ ಪಟ್ಟುಬಿಡದೆ ಮಾಡಬೇಕು?
ನಮ್ಮ ಕ್ರೈಸ್ತ ಜೀವನ
ಕ್ರಿಸ್ತನನ್ನು ಹಿಂಬಾಲಿಸಲು ನಿಮ್ಮ ಮಕ್ಕಳಿಗೆ ಸಹಾಯ ಮಾಡಿ
ತಮ್ಮ ಜೀವನವನ್ನು ಯೆಹೋವ ದೇವರಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆಯಲು ಹೆತ್ತವರು ಮಕ್ಕಳಿಗೆ ಹೇಗೆ ಸಹಾಯ ಮಾಡಬಹುದು?
ಬೈಬಲಿನಲ್ಲಿರುವ ರತ್ನಗಳು
ನಂಬಿಕೆಯನ್ನು ಬಲಪಡಿಸಿದ ದರ್ಶನ
ರೂಪಾಂತರ ದರ್ಶನ ಅಪೊಸ್ತಲ ಪೇತ್ರನ ಮೇಲೆ ಯಾವ ಪ್ರಭಾವ ಬೀರಿತು? ಬೈಬಲ್ ಪ್ರವಾದನೆಗಳು ನಮ್ಮ ಮೇಲೆ ಯಾವ ಪ್ರಭಾವ ಬೀರಬಲ್ಲವು?
ನಮ್ಮ ಕ್ರೈಸ್ತ ಜೀವನ
“ದೇವರು ಒಟ್ಟುಗೂಡಿಸಿದ್ದನ್ನು . . . ”
ಕ್ರೈಸ್ತ ದಂಪತಿಗಳು ತಮ್ಮ ವಿವಾಹ ಪ್ರತಿಜ್ಞೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಬೈಬಲಿನ ಈ ತತ್ವಗಳನ್ನು ಅನ್ವಯಿಸಿಕೊಳ್ಳುವ ಮೂಲಕ ಗಂಡ-ಹೆಂಡತಿ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು.
ಬೈಬಲಿನಲ್ಲಿರುವ ರತ್ನಗಳು
ಎಲ್ಲರಿಗಿಂತ ಈಕೆಯು ಹೆಚ್ಚನ್ನು ಹಾಕಿದ್ದಾಳೆ
ತೀರ ಕಡಿಮೆ ಬೆಲೆಯ ಎರಡು ನಾಣ್ಯಗಳನ್ನು ಕಾಣಿಕೆಯಾಗಿ ಕೊಟ್ಟ ಒಬ್ಬ ಬಡ ವಿಧವೆಯ ವೃತ್ತಾಂತದಿಂದ ನಾವು ಯಾವ ಅಮೂಲ್ಯ ಪಾಠಗಳನ್ನು ಕಲಿಯಬಹುದು?
ಬೈಬಲಿನಲ್ಲಿರುವ ರತ್ನಗಳು
ಮನುಷ್ಯನ ಭಯಕ್ಕೆ ಮಣಿಯಬೇಡಿ
ಅಪೊಸ್ತಲರು ಒತ್ತಡಕ್ಕೆ ಮಣಿಯಲು ಕಾರಣವೇನು? ಯೇಸುವಿನ ಪುನರುತ್ಥಾನದ ನಂತರ, ವಿರೋಧದ ಮಧ್ಯೆಯೂ ಸಾರುತ್ತಾ ಇರಲು ಪಶ್ಚಾತ್ತಾಪಪಟ್ಟಿದ್ದ ಅಪೊಸ್ತಲರಿಗೆ ಯಾವುದು ಸಹಾಯ ಮಾಡಿತು?
ನಮ್ಮ ಕ್ರೈಸ್ತ ಜೀವನ
ಯೆಹೋವನು ಸಹಾಯ ಮಾಡುತ್ತಾನೆ—ಧೈರ್ಯವಾಗಿರು!
ನೀವೊಬ್ಬ ಯೆಹೋವನ ಸಾಕ್ಷಿ ಎಂದು ಹೇಳಿಕೊಳ್ಳಲು ನಿಮಗೆ ಭಯ ಆಗುತ್ತಾ? ಹಾಗಾದರೆ ಯೆಹೋವನ ಬಗ್ಗೆ ಮಾತಾಡಲು ನೀವು ಹೇಗೆ ಧೈರ್ಯ ತಂದುಕೊಳ್ಳಬಹುದು?