ನಮ್ಮ ಕ್ರೈಸ್ತ ಜೀವನ
ಯೆಹೋವನು ಸಹಾಯ ಮಾಡುತ್ತಾನೆ—ಧೈರ್ಯವಾಗಿರು!
ನೀವಿನ್ನೂ ಶಾಲೆಯಲ್ಲಿ ಓದುತ್ತಿರುವುದಾದರೆ, ನೀವೊಬ್ಬ ಯೆಹೋವನ ಸಾಕ್ಷಿ ಎಂದು ಹೇಳಿಕೊಳ್ಳಲು ಮತ್ತು ಸಾಕ್ಷಿ ಕೊಡಲು ಭಯ ಆಗುತ್ತಾ? ಹಾಗಾದರೆ ಯೆಹೋವನ ಬಗ್ಗೆ ಮಾತಾಡಲು ನೀವು ಹೇಗೆ ಧೈರ್ಯ ತಂದುಕೊಳ್ಳಬಹುದು? (1ಥೆಸ 2:2) ಇದನ್ನು ಯಾಕೆ ಮಾಡಬೇಕು? ಯೆಹೋವನು ಸಹಾಯ ಮಾಡುತ್ತಾನೆ—ಧೈರ್ಯವಾಗಿರು! ವಿಡಿಯೋ ನೋಡಿ ಮತ್ತು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಡಿ:
-
ಧೈರ್ಯ ತಂದುಕೊಳ್ಳಲು ಸೋಫಿಯಾಗೆ ಬೈಬಲಿನಲ್ಲಿರುವ ಯಾರ ಉದಾಹರಣೆ ಸಹಾಯ ಮಾಡಿತು?
-
ಪ್ರಾಕ್ಟಿಸ್ ಮಾಡಿದ್ದರಿಂದ ಸೋಫಿಯಾಗೆ ಹೇಗೆ ಸಹಾಯವಾಯಿತು?
-
ನಿಮ್ಮ ಶಾಲೆಯಲ್ಲಿರುವ ಮಕ್ಕಳಿಗೆ ಯಾಕೆ ಸಾಕ್ಷಿ ಕೊಡಬೇಕು?
-
ನೀವು ಶಾಲೆ ಮುಗಿಸಿರುವವರಾದರೂ, ಈ ವಿಡಿಯೋದಿಂದ ಯಾವ ಪಾಠಗಳನ್ನು ಕಲಿಯಕ್ಕಾಯಿತು?