ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಯೆಹೋವನನ್ನ ಯಾವಾಗಲೂ ಮನಸ್ಸಲ್ಲಿಡಿ

ಯೆಹೋವನನ್ನ ಯಾವಾಗಲೂ ಮನಸ್ಸಲ್ಲಿಡಿ

ಎಷ್ಟು ಹುಡುಕಿದ್ರೂ ಕೆಲಸ ಸಿಗದೇ ಇದ್ದಾಗ ದೇವರ ಆಳ್ವಿಕೆಗೆ ಮೊದಲನೇ ಸ್ಥಾನ ಕೊಡೋಕೆ ಮತ್ತು ದೇವರು ಹೇಳೋದನ್ನ ಕೇಳೋಕೆ ನಮಗೆ ಕಷ್ಟ ಆಗಬಹುದು. ಆಗ ‘ದೇವರಿಗೆ ಇಷ್ಟ ಇಲ್ಲದಿರೋ, ದೇವರ ಸೇವೆ ಮಾಡೋಕೆ ಆಗದಿರೋ ಕೆಲಸ ಸಿಕ್ಕಿದ್ರೂ ಪರ್ವಾಗಿಲ್ಲ, ಕೆಲಸ ಬೇಕು’ ಅಂತ ಅನಿಸಿಬಿಡುತ್ತೆ. ಆದ್ರೆ “ಯಾರ ಹೃದಯ ಪೂರ್ಣವಾಗಿ ತನ್ನ ಕಡೆ ಇರುತ್ತೋ ಅಂಥವರಿಗೆ” ಯೆಹೋವ ಖಂಡಿತ ಸಹಾಯ ಮಾಡ್ತಾರೆ ಅನ್ನೋ ನಂಬಿಕೆ ನಮಗೆ ಇರಬೇಕು. (2ಪೂರ್ವ 16:9) ಪ್ರೀತಿಯ ಅಪ್ಪ ಯೆಹೋವ ನಮಗೆ ಬೇಕಾಗಿರೋದನ್ನ ಕೊಟ್ಟೇ ಕೊಡ್ತಾರೆ. ಆತನನ್ನ ತಡಿಯೋಕೆ ಯಾರಿಂದಾನೂ ಆಗಲ್ಲ. (ರೋಮ 8:32) ಹಾಗಾಗಿ ಕೆಲಸದ ಬಗ್ಗೆ ನಿರ್ಧಾರ ಮಾಡುವಾಗ ಯೆಹೋವ ದೇವರ ಮೇಲೆ ನಂಬಿಕೆ ಇಡೋಣ, ಆತನ ಸೇವೆಗೆ ಮೊದಲ ಸ್ಥಾನ ಕೊಡೋಣ.—ಕೀರ್ತ 16:8.

ಎಲ್ಲವನ್ನು ಯೆಹೋವನಿಗಾಗಿ ಮಾಡಿ ವಿಡಿಯೋ ನೋಡಿ, ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಜೇಸನ್‌ ಯಾಕೆ ಲಂಚ ತಗೊಳ್ಳಲಿಲ್ಲ?

  • ಕೊಲೊಸ್ಸೆ 3:23ರಲ್ಲಿ ಹೇಳಿರೋ ಮಾತು ನಮಗೆ ಹೇಗೆ ಅನ್ವಯಿಸುತ್ತೆ?

  • ಜೇಸನಿಂದ ತಾಮಸ್‌ ಏನು ಕಲಿತರು?

  • ಏನೇ ಮಾಡಿದ್ರೂ ಯಾವ ನಿರ್ಧಾರ ತಗೊಂಡ್ರೂ ಯೆಹೋವನಿಗೋಸ್ಕರನೇ ಮಾಡಿ

    ಮತ್ತಾಯ 6:22ರಿಂದ ನಮಗೆ ಯಾವ ಪಾಠ ಇದೆ?