ನಮ್ಮ ಕ್ರೈಸ್ತ ಜೀವನ
ಒಳ್ಳೇ ತೀರ್ಮಾನ ತಗೊಳ್ಳೋಕೆ ತರಬೇತಿ ಮಾಡಿಕೊಳ್ತಾ ಇರಿ
ಒಬ್ಬ ಓಟಗಾರ ಚೆನ್ನಾಗಿ ಓಡಬೇಕಂದ್ರೆ ಸ್ನಾಯುಗಳಿಗೆ ಚೆನ್ನಾಗಿ ತರಬೇತಿ ಕೊಡಬೇಕು. ಅದೇ ತರ ನಾವೂ ಒಳ್ಳೇ ತೀರ್ಮಾನ ಮಾಡೋಕೆ ಅಂದರೆ ಸರಿ ಯಾವುದು, ತಪ್ಪು ಯಾವುದು ಅನ್ನೋ ವ್ಯತ್ಯಾಸ ತಿಳ್ಕೊಳ್ಳೋಕೆ ನಮ್ಮ ಯೋಚನೆಗೆ ತರಬೇತಿ ಕೊಡಬೇಕು. (ಇಬ್ರಿ 5:14) ಯಾವಾಗಲೂ ಬೇರೆಯವರ ಸಲಹೆಗಳಿಗಾಗಿ ಕಾಯ್ತಾ ಕೂರದೆ ನಾವೇ ಯಾವುದು ಸರಿ ಯಾವುದು ತಪ್ಪು ಅಂತ ಕಂಡುಹಿಡಿಬೇಕು. ಯಾಕಂದ್ರೆ ನಾವು ಮಾಡೋ ತೀರ್ಮಾನಗಳಿಗೆ ನಾವೇ ದೇವರಿಗೆ ಲೆಕ್ಕ ಕೊಡಬೇಕು.—ರೋಮ 14:12.
ದೀಕ್ಷಾಸ್ನಾನ ಪಡೆದು ತುಂಬ ವರ್ಷಗಳಾದ ಕೂಡಲೇ ನಾವು ಮಾಡೋ ತೀರ್ಮಾನಗಳೆಲ್ಲಾ ಸರಿಯಾಗೇ ಇರುತ್ತೆ ಅಂದ್ಕೊಬಾರದು. ಬದಲಿಗೆ ತೀರ್ಮಾನ ಮಾಡೋ ಮುಂಚೆ ಯೆಹೋವದೇವರು, ಬೈಬಲ್ ಮತ್ತು ಆತನ ಸಂಘಟನೆ ಏನು ಹೇಳುತ್ತೆ ಅಂತ ನೋಡಬೇಕು.—ಯೆಹೋ 1:7, 8; ಜ್ಞಾನೋ 3:5, 6; ಮತ್ತಾ 24:45.
“ಒಳ್ಳೇ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಿ” ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
-
ಏಮಾಗೆ ಯಾವ ಸನ್ನಿವೇಶ ಎದುರಾಯ್ತು?
-
ಮನಸ್ಸಾಕ್ಷಿಗೆ ಸಂಬಂಧಪಟ್ಟ ವಿಷಯಗಳಲ್ಲಿ ನಮಗೆ ಸರಿ ಅನಿಸಿದ್ದನ್ನ ಯಾಕೆ ಹೇಳಬಾರದು?
-
ಆ ದಂಪತಿ ಏಮಾಗೆ ಯಾವ ಸಲಹೆ ಕೊಟ್ರು?
-
ಏಮಾಳ ಸನ್ನಿವೇಶ ಸರಿಪಡಿಸೋಕೆ ಎಲ್ಲಿಂದ ಒಳ್ಳೇ ಸಲಹೆ ಸಿಕ್ತು?