ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ
ಸಂಶೋಧನಾ ಸಾಧನಗಳನ್ನ ಬಳಸಿ
ನಾವು ಜನರಿಗೆ ಚೆನ್ನಾಗಿ ಕಲಿಸೋಕೆ ಬೇಕಾಗಿರೋ ಸಾಧನಗಳನ್ನ ಯೆಹೋವ ದೇವರು ಕೊಟ್ಟಿದ್ದಾರೆ. ಅದ್ರಲ್ಲಿ ಮುಖ್ಯವಾಗಿ ಬೈಬಲ್ ಇದೆ. ಇದಲ್ಲದೆ ವಿಡಿಯೋಗಳು, ಕರಪತ್ರಗಳು, ಪತ್ರಿಕೆಗಳು, ಕಿರುಹೊತ್ತಗೆಗಳು, ಪುಸ್ತಕಗಳೂ ಇದೆ. (2 ತಿಮೊ 3:16) ಅಷ್ಟೇ ಅಲ್ಲ, ವಚನಗಳನ್ನ ಚೆನ್ನಾಗಿ ವಿವರಿಸೋಕೆ ಸಂಶೋಧನಾ ಸಾಧನಗಳನ್ನ ಕೊಟ್ಟಿದ್ದಾರೆ. ಅದ್ರಲ್ಲಿ ವಾಚ್‌ಟವರ್ ಲೈಬ್ರರಿ, JW ಲೈಬ್ರರಿ ಆ್ಯಪ್, ವಾಚ್‌ಟವರ್ ಆನ್‌ಲೈನ್ ಲೈಬ್ರರಿ ಮತ್ತು ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಕೂಡ ಸೇರಿದೆ.
ಈ ಸಾಧನಗಳನ್ನ ಬಳಸಿ ಬೈಬಲಲ್ಲಿ ಅಡಗಿರೋ ರತ್ನಗಳನ್ನ ಹುಡುಕಿ ತೆಗೆದಾಗ ನಿಮಗೆ ತುಂಬ ಖುಷಿಯಾಗುತ್ತೆ ಅಲ್ವಾ? ಈ ಸಾಧನಗಳನ್ನ ಹೇಗೆ ಬಳಸೋದು ಅಂತ ನಿಮ್ಮ ವಿದ್ಯಾರ್ಥಿಗಳಿಗೂ ಕಲಿಸಿ. ಆಗ ಅವರಿಗಿರೋ ಪ್ರಶ್ನೆಗಳಿಗೆ ಅವರಾಗಿಯೇ ಉತ್ತರ ಹುಡುಕಿ ಖುಷಿಪಡ್ತಾರೆ.
ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಯೆಹೋವ ಕೊಡೋ ಸಹಾಯ—ಸಂಶೋಧನಾ ಸಾಧನಗಳನ್ನ ಬಳಸಿ ಅನ್ನೋ ವಿಡಿಯೋ ನೋಡಿ ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:
-
ಸೃಷ್ಟಿ ಬಗ್ಗೆ ನೀತಾ ಹೇಳಿದಾಗ ಜಾಸ್ಮಿನ್ ಏನಂದಳು?
-
ನೀತಾಗೆ ಸೃಷ್ಟಿ ಬಗ್ಗೆ ಇರೋ ಮಾಹಿತಿ ಎಲ್ಲಿ ಸಿಕ್ತು?
-
ಸಿಕ್ಕಿದ್ದ ಮಾಹಿತಿಗಳಲ್ಲಿ ಜಾಸ್ಮಿನ್‌ಗೆ ಬೇಕಾಗಿರೋದನ್ನ ನೀತಾ ಹೇಗೆ ಆರಿಸಿದಳು?
-
ನಮ್ಮ ಸಂಶೋಧನಾ ಸಾಧನಗಳಿಂದ ನೀತಾಗೆ ಹೇಗೆ ಸಹಾಯ ಆಯ್ತು?