ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

“ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆ ಬಳಸಿ”

“ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆ ಬಳಸಿ”

ಬೈಬಲ್‌ ಸ್ಟಡಿ ಮಾಡೋಕೆ ಹೊಸ ಕಿರುಹೊತ್ತಗೆ ಮತ್ತು ಪುಸ್ತಕ ಸಿಕ್ಕಿದ್ದಕ್ಕೆ ನಮಗೆ ತುಂಬ ಖುಷಿ ಆಗಿದೆ. ಇವನ್ನ ಬಳಸಿ ಇನ್ನೂ ಹೆಚ್ಚು ಶಿಷ್ಯರನ್ನ ಮಾಡೋಕೆ ಪ್ರಯತ್ನಿಸ್ತೀವಿ, ಇದರ ಮೇಲೆ ಯೆಹೋವ ದೇವರ ಆಶೀರ್ವಾದ ಇರಲಿ ಅಂತ ಬೇಡಿಕೊಳ್ತೀವಿ. (ಮತ್ತಾ 28:18-20; 1ಕೊರಿಂ 3:6-9) ಈ ಕಿರುಹೊತ್ತಗೆ ಮತ್ತು ಪುಸ್ತಕ ಬಳಸೋದು ಹೇಗೆ?

ಈ ಕಿರುಹೊತ್ತಗೆ ಬಳಸಿ ನಾವು ಹೊಸ ವಿಧಾನದಲ್ಲಿ ಸ್ಟಡಿ ಮಾಡ್ತೀವಿ. ವಿದ್ಯಾರ್ಥಿ ಜೊತೆ ಹೆಚ್ಚು ಚರ್ಚೆ ಮಾಡ್ತೀವಿ. ಹಾಗಾಗಿ ಸ್ಟಡಿಗೆ ತಯಾರಿ ಮಾಡುವಾಗ ಮತ್ತು ಸ್ಟಡಿ ಮಾಡುವಾಗ ಕೆಳಗಿರೋ ಸಲಹೆಗಳನ್ನ ಪಾಲಿಸಿ. *

  • ಪಾಠ ಓದಿ, ಪ್ರಶ್ನೆ ಕೇಳಿ, ಚರ್ಚೆ ಮಾಡಿ

  • “ಓದಿ” ಅಂತ ಕೊಟ್ಟಿರೋ ವಚನಗಳನ್ನ ಓದಿ, ಅದನ್ನ ಪಾಲಿಸೋದು ಹೇಗೆ ಅಂತ ಅರ್ಥ ಮಾಡಿಕೊಳ್ಳೋಕೆ ವಿದ್ಯಾರ್ಥಿಗೆ ಸಹಾಯ ಮಾಡಿ

  • ವಿಡಿಯೋಗಳನ್ನ ನೋಡಿ, ಕೊಟ್ಟಿರೋ ಪ್ರಶ್ನೆಗಳನ್ನ ಚರ್ಚೆ ಮಾಡಿ

  • ಒಂದು ಭೇಟಿಯಲ್ಲೇ ಒಂದು ಪಾಠವನ್ನ ಮುಗಿಸೋಕೆ ಪ್ರಯತ್ನಿಸಿ

ಸೇವೆಯಲ್ಲಿ ಮನೆಯವರಿಗೆ ಮೊದಲು ಕಿರುಹೊತ್ತಗೆ ಕೊಟ್ಟು ಆಸಕ್ತಿ ಇದ್ಯಾ ಅಂತ ಪರೀಕ್ಷಿಸಿ. (“ ಆರಂಭದ ಭೇಟಿಯಲ್ಲೇ ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆ ಕೊಡೋದು ಹೇಗೆ?” ಅನ್ನೋ ಚೌಕ ನೋಡಿ.) ಕಿರುಹೊತ್ತಗೆಯನ್ನ ಪೂರ್ತಿ ಚರ್ಚಿಸಿದ ಮೇಲೆ ಮನೆಯವರಿಗೆ ಚರ್ಚೆ ಮುಂದುವರಿಸೋಕೆ ಇಷ್ಟ ಇದ್ರೆ, ಆಗ ಪುಸ್ತಕ ಕೊಟ್ಟು 4ನೇ ಪಾಠದಿಂದ ಚರ್ಚೆ ಶುರು ಮಾಡಿ. ನೀವು ಈಗಾಗಲೇ ಒಬ್ಬರಿಗೆ ಬೈಬಲ್‌ ಕಲಿಸುತ್ತದೆ ಅಥವಾ “ದೇವರ ಪ್ರೀತಿ” ಪುಸ್ತಕದಿಂದ ಚರ್ಚೆ ಮಾಡ್ತಾ ಇರೋದಾದ್ರೆ, ಅದರ ಬದಲು ಅವರಿಗೆ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದಿಂದ ಚರ್ಚೆ ಆರಂಭಿಸಿ. ಯಾವ ಪಾಠದಿಂದ ಶುರು ಮಾಡಬೇಕು ಅಂತ ನೀವೇ ನಿರ್ಧಾರ ಮಾಡಿ.

ಬೈಬಲ್‌ ಸ್ಟಡಿಯನ್ನು ಆನಂದಿಸಿ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಹೊಸ ಪುಸ್ತಕದಿಂದ ವಿದ್ಯಾರ್ಥಿಗಳು ಏನೆಲ್ಲಾ ಕಲೀತಾರೆ?

  • ಹೊಸ ವಿದ್ಯಾರ್ಥಿಗಳಿಗೆ ಯಾಕೆ ಈ ವಿಡಿಯೋ ತೋರಿಸಬೇಕು?

  • ಹಂತಹಂತವಾಗಿ ಯಾವ ಗುರಿಗಳನ್ನ ಇಟ್ಟು ಮುಟ್ಟೋಕೆ ನಿಮ್ಮ ವಿದ್ಯಾರ್ಥಿಯನ್ನ ಪ್ರೋತ್ಸಾಹಿಸಬೇಕು?—“ ಒಂದೊಂದು ಭಾಗದಲ್ಲೂ ಏನಿದೆ? ಏನು ಮಾಡಬೇಕು?” ಚಾರ್ಟ್‌ ನೋಡಿ.

^ ಪ್ಯಾರ. 4 ಸೂಚನೆ: “ಇದನ್ನೂ ನೋಡಿ” ಅನ್ನೋ ಚೌಕವನ್ನ ವಿದ್ಯಾರ್ಥಿ ಜೊತೆ ಚರ್ಚೆ ಮಾಡಲೇಬೇಕು ಅಂತೇನಿಲ್ಲ. ಆದ್ರೆ ನೀವು ಸ್ಟಡಿಗೆ ತಯಾರಿ ಮಾಡುವಾಗ ಅದ್ರಲ್ಲಿ ಕೊಟ್ಟಿರೋ ವಿಷ್ಯಗಳನ್ನ ಓದಿ, ಕೊಟ್ಟಿರೋ ವಿಡಿಯೋಗಳನ್ನ ನೋಡಿ. ಆಗ ನಿಮ್ಮ ವಿದ್ಯಾರ್ಥಿಗೆ ಹೇಗೆಲ್ಲ ಸಹಾಯ ಮಾಡಬಹುದು ಅಂತ ಗೊತ್ತಾಗುತ್ತೆ. ಎಲೆಕ್ಟ್ರಾನಿಕ್‌ ಪ್ರತಿಗಳಲ್ಲಿ ವಿಡಿಯೋಗಳಿಗೆ ಮತ್ತು ಬೇರೆಬೇರೆ ಪ್ರಕಾಶನಗಳಿಗೆ ಲಿಂಕ್‌ ಕೊಡಲಾಗಿದೆ.

 ಒಂದೊಂದು ಭಾಗದಲ್ಲೂ ಏನಿದೆ? ಏನು ಮಾಡಬೇಕು?

 

ಪಾಠಗಳು

ಏನಿದೆ?

ಏನು ಮಾಡಬೇಕು?

1

01-12

ಬೈಬಲಿನಿಂದ ನಿಮಗಿರೋ ಪ್ರಯೋಜನದ ಬಗ್ಗೆ ಮತ್ತು ಅದನ್ನ ಬರೆಸಿದವನ ಬಗ್ಗೆ ಒಂದಿಷ್ಟು ಮಾಹಿತಿ

ಬೈಬಲ್‌ ಓದೋಕೆ, ಸ್ಟಡಿಗೆ ತಯಾರಿ ಮಾಡೋಕೆ, ಕೂಟಗಳಿಗೆ ಬರೋಕೆ ಪ್ರೋತ್ಸಾಹಿಸಿ

2

13-33

ದೇವರು ನಮಗಾಗಿ ಮಾಡಿರುವ ವಿಷಯಗಳು ಮತ್ತು ಆತನು ಮೆಚ್ಚುವ ಆರಾಧನೆ

ಕಲಿತಿದ್ದನ್ನ ಬೇರೆಯವರಿಗೆ ಹೇಳೋಕೆ, ಪ್ರಚಾರಕರಾಗೋಕೆ ಹುರಿದುಂಬಿಸಿ

3

34-47

ಯೆಹೋವನ ಆರಾಧಕರು ಮಾಡಬೇಕಾದ ವಿಷಯಗಳು

ಸಮರ್ಪಣೆ ಮಾಡಿಕೊಂಡು, ದೀಕ್ಷಾಸ್ನಾನ ತಗೊಳ್ಳೋಕೆ ಪ್ರೋತ್ಸಾಹಿಸಿ

4

48-60

ನಾವು ದೇವರ ಪ್ರೀತಿಯಲ್ಲಿ ಉಳಿಯಲು ಮಾಡಬೇಕಾದ ವಿಷಯಗಳು

ಸರಿ-ತಪ್ಪನ್ನ ಕಂಡುಹಿಡಿಯೋದು, ದೇವರಿಗೆ ಇನ್ನೂ ಹತ್ರ ಆಗೋದು ಹೇಗೆ ಅಂತ ಕಲಿಸಿ