ನಮ್ಮ ಕ್ರೈಸ್ತ ಜೀವನ
ಸತ್ತವರು ಮತ್ತೆ ಬದುಕಿ ಬರುವ ತನಕ . . .
ನಮ್ಮವರು ಯಾರಾದ್ರೂ ತೀರಿಕೊಂಡಾಗ ಯೆಹೋವ ಅವರನ್ನ ಮತ್ತೆ ಬದುಕಿಸ್ತಾನೆ ಅನ್ನೋದನ್ನ ನೆನಸಿಕೊಂಡಾಗ ನಮಗೆ ಸಮಾಧಾನ ಆಗುತ್ತೆ. ಆದ್ರೂ ಪಾಪ ಮತ್ತು ಮರಣ ನಮ್ಮನ್ನ ಉಸಿರುಗಟ್ಟಿಸುತ್ತೆ. (ಯೆಶಾ 25:7, 8) ಇದ್ರಿಂದ “ಸೃಷ್ಟಿಯೆಲ್ಲ ಇವತ್ತಿನ ತನಕ ಒಟ್ಟಿಗೆ ನರಳ್ತಾ ನೋವನ್ನ ಅನುಭವಿಸ್ತಿದೆ.” (ರೋಮ 8:22) ಹಾಗಾದ್ರೆ ಸತ್ತವರು ಮತ್ತೆ ಬದುಕಿ ಬರುವ ತನಕ ನಾವು ಈ ನೋವನ್ನ ಹೇಗೆ ಸಹಿಸಿಕೊಳ್ಳೋದು? ಅದಕ್ಕೆ ಬೈಬಲ್‌ನಲ್ಲಿರೋ ಕೆಲವು ತತ್ವಗಳು ಸಹಾಯ ಮಾಡುತ್ತೆ.
ನಾವು ಪ್ರೀತಿಸುವವರು ನಮ್ಮಿಂದ ಅಗಲಿದಾಗ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
-
ಡ್ಯಾನಿಯೆಲಾ ಮತ್ತು ಮಸಹಿರೋ, ಯೊಷಿಮಿಯವರು ಯಾವ ನೋವನ್ನ ಅನುಭವಿಸಿದ್ರು?
-
ಅವರಿಗೆ 5 ವಿಷಯಗಳು ಹೇಗೆ ಸಹಾಯ ಮಾಡಿತು?
-
ಎಲ್ಲರಿಗಿಂತ ಚೆನ್ನಾಗಿ ಸಾಂತ್ವನ ಕೊಡುವವನು ಯಾರು?—2ಕೊರಿಂ 1:3, 4