ಬೈಬಲಿನಲ್ಲಿರುವ ನಿಧಿ
ಇರೋದ್ರಲ್ಲೇ ತೃಪ್ತಿಪಡಿ, ನಿಮ್ಮ ಇತಿಮಿತಿಗಳನ್ನ ತಿಳಿದುಕೊಳ್ಳಿ
ಯಾರೊಬ್ಬಾಮ ಕೊಟ್ಟ ಬೆಲೆಬಾಳುವ ಉಡುಗೊರೆಗಳನ್ನ ದೇವರ ಪ್ರವಾದಿ ಬೇಡ ಅಂತ ಹೇಳಿದ (1ಅರ 13:7-10; ಕಾವಲಿನಬುರುಜು08 8/15 ಪುಟ 8 ಪ್ಯಾರ 4)
ಆಮೇಲೆ ಆ ಪ್ರವಾದಿ ಯೆಹೋವನ ಆಜ್ಞೆಯನ್ನ ಪಾಲಿಸಲಿಲ್ಲ (1ಅರ 13:14-19; ಕಾವಲಿನಬುರುಜು08 8/15 ಪುಟ 11 ಪ್ಯಾರ 15)
ಯೆಹೋವನ ಮಾತನ್ನ ಕೇಳದೇ ಆ ಪ್ರವಾದಿ ತೊಂದ್ರೆನ ಮೈಮೇಲೆ ಎಳ್ಕೊಂಡ (1ಅರ 13:20-22; ಕಾವಲಿನಬುರುಜು08 8/15 ಪುಟ 9 ಪ್ಯಾರ 10)
ನಾವು ನಿರ್ಧಾರಗಳನ್ನ ಮಾಡುವಾಗ ನಮ್ಮ ಹತ್ರ ಇರೋದ್ರಲ್ಲೇ ತೃಪ್ತಿಯಾಗಿದ್ರೆ ಮತ್ತು ಯೆಹೋವನ ಹತ್ರ ಮಾರ್ಗದರ್ಶನೆ ಕೇಳಿದ್ರೆ ಮುಂದೆ ಬರೋ ತೊಂದರೆಗಳಿಂದ ತಪ್ಪಿಸಿಕೊಳ್ತೀವಿ. (1ತಿಮೊ 6:8-10)
ನಿಮ್ಮನ್ನೇ ಕೇಳಿಕೊಳ್ಳಿ: ‘ನಾನು ನನ್ನ ಹತ್ರ ಇರೋದ್ರಲ್ಲೇ ತೃಪ್ತಿಯಾಗಿದ್ದೀನಾ? ನಾನು ನನ್ನ ಇತಿಮಿತಿಗಳನ್ನ ಚೆನ್ನಾಗಿ ತಿಳಿದುಕೊಂಡಿದ್ದೀನಿ ಅಂತ ನನ್ನ ನಿರ್ಧಾರಗಳು ತೋರಿಸಿಕೊಡುತ್ತಾ?’—ಜ್ಞಾನೋ 3:5; 11:2.