ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಹಣಕಾಸಿನ ತೊಂದರೆ ಇದ್ರೂ ಧೈರ್ಯವಾಗಿರಿ

ಹಣಕಾಸಿನ ತೊಂದರೆ ಇದ್ರೂ ಧೈರ್ಯವಾಗಿರಿ

ಈ ಕೊನೇ ದಿನಗಳಲ್ಲಿ ನಾವು ತುಂಬ ತೊಂದರೆಗಳನ್ನ ಅನುಭವಿಸ್ತಿದ್ದೀವಿ. ಲೋಕದ ಅಂತ್ಯ ಹತ್ತಿರ ಆಗ್ತಾ ಇದ್ದ ಹಾಗೆ ಕಷ್ಟಗಳು ಇನ್ನೂ ಜಾಸ್ತಿಯಾಗುತ್ತೆ. ನಮಗೆ ಒಂದಲ್ಲಾ ಒಂದು ಕೊರತೆ ಬರಬಹುದು. (ಹಬ 3:16-18) ಹಾಗಾದ್ರೆ ಹಣಕಾಸಿನ ತೊಂದರೆ ಇದ್ರೂ ಧೈರ್ಯವಾಗಿರೋಕೆ ನಮಗೆ ಯಾವುದು ಸಹಾಯಮಾಡುತ್ತೆ? ಯೆಹೋವನ ಮೇಲಿರೋ ನಂಬಿಕೆ ಸಹಾಯಮಾಡುತ್ತೆ. ತನ್ನ ಸೇವಕರನ್ನ ನೋಡಿಕೊಳ್ತೀನಿ ಅಂತ ಆತನು ಮಾತುಕೊಟ್ಟಿದ್ದಾನೆ ಮತ್ತು ನಾವು ಎಂಥ ಪರಿಸ್ಥಿತಿಯಲ್ಲಿದ್ದರೂ ನಮಗೆ ಬೇಕಾಗಿರೋದನ್ನ ಕೊಟ್ಟೇ ಕೊಡ್ತಾನೆ.—ಕೀರ್ತ 37:18, 19; ಇಬ್ರಿ 13:5, 6.

ನೀವೇನು ಮಾಡಬೇಕು:

  • ವಿವೇಕ, ಮಾರ್ಗದರ್ಶನ ಮತ್ತು ಸಹಾಯಕ್ಕಾಗಿ ಯೆಹೋವನ ಹತ್ರ ಬೇಡಿಕೊಳ್ಳಿ.—ಕೀರ್ತ 62:8

  • ಈ ಮುಂಚೆ ನೀವು ಮಾಡದೇ ಇದ್ದ ಕೆಲಸಗಳನ್ನ ಮಾಡೋಕೂ ರೆಡಿಯಾಗಿರಿ.—ಎಚ್ಚರ! 4/10 ಪುಟ 30-31ರಲ್ಲಿರೋ ಚೌಕಗಳು

  • ಆಧ್ಯಾತ್ಮಿಕ ರೂಢಿಗಳನ್ನ ಅಂದ್ರೆ, ದಿನಾಲೂ ಬೈಬಲ್‌ ಓದೋದು, ಕೂಟಗಳಿಗೆ ಹೋಗೋದು, ಮತ್ತು ಸೇವೆಗೆ ಹೋಗೋದನ್ನ ನಿಲ್ಲಿಸಬೇಡಿ

ಸ್ಥಿರವಾಗಿ ಉಳಿಯುವ ಮನೆಯನ್ನು ಕಟ್ಟಿ—ನಿಮಗಿರುವವುಗಳಲ್ಲೇ ತೃಪ್ತರಾಗಿರಿ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಕೆಲವು ಕುಟುಂಬಗಳಿಗೆ ಯಾವ ಕಷ್ಟಗಳು ಬಂತು?

  • ಜೀವನದಲ್ಲಿ ಯಾವುದು ತುಂಬ ಮುಖ್ಯ?

  • ಹಣಕಾಸಿನ ತೊಂದ್ರೆ ಇರುವವರಿಗೆ ನಾವು ಹೇಗೆ ಸಹಾಯ ಮಾಡಬಹುದು?