ನಮ್ಮ ಕ್ರೈಸ್ತ ಜೀವನ
ಮನಸ್ಸು ಚೂರುಚೂರಾಗಿ ಹೋಗಿರೋರನ್ನ ಯೆಹೋವ ಕಾಪಾಡ್ತಾನೆ
ನಮ್ಮೆಲ್ರಿಗೂ ಬೇಜಾರಾಗೋದು ಸಹಜನೇ. ಆದ್ರೆ ಅದರ ಅರ್ಥ ನಮಗೆ ಯೆಹೋವ ದೇವರ ಮೇಲೆ ನಂಬಿಕೆ ಇಲ್ಲ ಅಂತಲ್ಲ. ಯೆಹೋವ ದೇವರಿಗೂ ಕೆಲವೊಮ್ಮೆ ಬೇಜಾರಾಗಿದೆ ಅಂತ ಆತನೇ ಹೇಳ್ಕೊಂಡಿದ್ದಾನೆ. (ಆದಿ 6:5, 6) ಆದ್ರೆ ನಮಗೆ ದುಃಖದಿಂದ ಹೊರಗೆ ಬರೋಕೇ ಆಗ್ತಿಲ್ಲಾಂದ್ರೆ ಏನು ಮಾಡಬೇಕು?
ಯೆಹೋವ ದೇವರ ಹತ್ರ ಸಹಾಯ ಕೇಳಿ. ನಮ್ಮ ಮನಸ್ಸಲ್ಲಿರೋ ದುಃಖನ ತಿಳಿಯೋ ಆಸೆ ಯೆಹೋವನಿಗಿದೆ. ನಾವು ದುಃಖದಲ್ಲಿದ್ದೀವಾ ಅಥವಾ ಖುಷಿಯಾಗಿ ಇದ್ದೀವಾ ಅಂತ ಆತನಿಗೆ ಗೊತ್ತಾಗುತ್ತೆ. ನಮಗೆ ಯಾಕೆ ದುಃಖ ಆಗ್ತಿದೆ ಅಂತನೂ ಆತನು ಅರ್ಥ ಮಾಡ್ಕೊತಾನೆ. (ಕೀರ್ತ 7:9ಬಿ) ಎಲ್ಲಕ್ಕಿಂತ ಮುಖ್ಯವಾಗಿ, ಆತನಿಗೆ ನಮ್ಮೇಲೆ ಕಾಳಜಿ ಇದೆ. ಹಾಗಾಗಿ ನಮ್ಮ ಮನಸ್ಸಲ್ಲಿ ಒಂಚೂರು ದುಃಖ ಆಗಲಿ ಖಿನ್ನತೆ ಆಗಲಿ ಇದ್ರೆ ಆತನು ನಮಗೆ ಸಹಾಯ ಮಾಡ್ತಾನೆ.—ಕೀರ್ತ 34:18.
ಮನಸ್ಸಿನ ಆರೋಗ್ಯ ಕಾಪಾಡ್ಕೊಳ್ಳಿ. ನಮಗೆ ಭಯ, ಚಿಂತೆ, ನಿರಾಶೆ ಇದ್ರೆ ನಾವು ಖುಷಿಯಾಗಿ ಇರಲ್ಲ. ಅಷ್ಟೇ ಅಲ್ಲ, ಯೆಹೋವನ ಜೊತೆ ಇರೋ ಸ್ನೇಹನೂ ಹಾಳಾಗುತ್ತೆ. ಹಾಗಾಗಿ ನಮ್ಮ ಹೃದಯ ಅಂದ್ರೆ, ನಮ್ಮ ಯೋಚ್ನೆ, ಭಾವನೆಗಳನ್ನ ಕಾಪಾಡ್ಕೊಬೇಕು.—ಜ್ಞಾನೋ 4:23.
ನಮ್ಮ ಸಹೋದರರು ಶಾಂತಿಯಿಂದಿದ್ದಾರೆ: ಖಿನ್ನತೆ ಇದ್ದರೂ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ರ ಕೊಡಿ:
-
ಖಿನ್ನತೆಯಿಂದ ಹೊರಗೆ ಬರೋಕೆ ನಿಕ್ಕಿ ಏನೆಲ್ಲಾ ಮಾಡಿದ್ರು?
-
ತಾನು ಡಾಕ್ಟರ್ ಸಹಾಯ ಪಡೆಯೋದು ಒಳ್ಳೇದು ಅಂತ ನಿಕ್ಕಿಗೆ ಯಾಕೆ ಅನಿಸ್ತು?—ಮತ್ತಾ 9:12
-
ಯೆಹೋವನ ಸಹಾಯ ಪಡೆಯೋಕೆ ನಿಕ್ಕಿ ಏನೆಲ್ಲಾ ಮಾಡಿದ್ರು?