ನಮ್ಮ ಕ್ರೈಸ್ತ ಜೀವನ
ಸೇವೆಯಲ್ಲಿ JW.ORG ವೆಬ್ಸೈಟಿನ ಮುಖಪುಟ ಬಳಸಿ
ನಮ್ಮ ವೆಬ್ಸೈಟಿನ ಮುಖಪುಟದಲ್ಲಿ ಒಳ್ಳೇ ಮನಸ್ಸಿನ ಜನ್ರಿಗೆ ಇಷ್ಟ ಆಗೋ ಲೇಖನಗಳು, ವಿಡಿಯೋಗಳು ಇರುತ್ತೆ. (ಅಕಾ 13:48) ಹೆಚ್ಚಾಗಿ ಜನ್ರ ಬಾಯಲ್ಲಿರೋ ಅಥವಾ ನ್ಯೂಸಲ್ಲಿ ಹರಿದಾಡ್ತಿರೋ ವಿಷ್ಯಗಳೂ ಅದ್ರಲ್ಲಿ ಇರುತ್ತೆ.
ಈ ಮುಖಪುಟವನ್ನ ಸೇವೆಯಲ್ಲಿ ಹೇಗೆ ಬಳಸಬಹುದು?
-
ನಮ್ಮ ವೆಬ್ಸೈಟನ್ನ ಆಗಾಗ ನೋಡ್ತಾ ಇರಿ. ಮುಖಪುಟದಲ್ಲಿ “ಆಯ್ದ ವಿಷಯಗಳು” ಅನ್ನೋ ಭಾಗದಲ್ಲಿರೋ ಲೇಖನಗಳನ್ನ ನೋಡಿ. ಅವನ್ನ ಜನ್ರಿಗೆ ಹೇಗೆ ಪರಿಚಯಿಸೋದು ಅಂತ ಯೋಚ್ನೆ ಮಾಡಿ. (ಮುಖಪುಟದಲ್ಲಿ ಈ ಮುಂಚೆ ಬಂದಿದ್ದ ಲೇಖನಗಳನ್ನ ಹುಡುಕೋಕೆ “ಹೆಚ್ಚಿನ ಮಾಹಿತಿ” ಕ್ಲಿಕ್ ಮಾಡಿ.) ಹೀಗೆ ವೆಬ್ಸೈಟನ್ನ ಆಗಾಗ ನೋಡ್ತಾ ಇದ್ರೆ ಜನ್ರ ಹತ್ರ ಮಾತಾಡೋಕೆ ಹೊಸ ಹೊಸ ಐಡಿಯಗಳು ಸಿಗುತ್ತೆ.
-
ಮುಖಪುಟದಲ್ಲಿರೋ ವಿಡಿಯೋ ಅಥವಾ ಲೇಖನ ಬಳಸಿ ಮಾತು ಆರಂಭಿಸಿ. ಅದ್ರಲ್ಲಿರೋ ವಿಷ್ಯಗಳನ್ನ ನೋಡಿದಾಗ ಜನ್ರು ಯಾವುದ್ರ ಬಗ್ಗೆ ಯೋಚ್ನೆ ಮಾಡ್ತಿದ್ದಾರೆ ಅಂತ ಗೊತ್ತಾಗುತ್ತೆ.
-
ಜನ್ರಿಗೆ ಮುಖಪುಟ ತೋರಿಸಿ. ಯಾವುದಾದ್ರು ಒಂದು ವಿಷ್ಯನ ತೋರಿಸಿ ಜನ್ರ ಹತ್ರ ಮಾತಾಡಿ. ಅದ್ರ ಬಗ್ಗೆ ಜಾಸ್ತಿ ತಿಳ್ಕೊಳ್ಳೋದು ಹೇಗೆ ಅಂತ ತೋರಿಸ್ಕೊಡಿ.
-
ಲಿಂಕ್ ಕಳಿಸಿ. ಜನ್ರಿಗೆ ನಮ್ಮ ಹತ್ರ ಮಾತಾಡೋಕೆ ಇಷ್ಟ ಇಲ್ಲದಿರಬಹುದು. ಆದ್ರೆ ಅವರು ನಮ್ಮ ವೆಬ್ಸೈಟನ್ನ ನೋಡ್ತಾರೆ. ಹಾಗಾಗಿ ಆಸಕ್ತಿ ಇರೋರಿಗೆ ಮುಖಪುಟದ ಲಿಂಕನ್ನ ಅಥವಾ ಅದ್ರಲ್ಲಿರೋ ಲೇಖನದ ಅಥವಾ ವಿಡಿಯೋ ಲಿಂಕನ್ನ ಕಳಿಸಿ.