ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ದೇವರು ಕೊಡೋ ವಿವೇಕ ಪಡ್ಕೊಳ್ಳೋಕೆ ಮಕ್ಕಳಿಗೆ ಸಹಾಯ ಮಾಡಿ

ದೇವರು ಕೊಡೋ ವಿವೇಕ ಪಡ್ಕೊಳ್ಳೋಕೆ ಮಕ್ಕಳಿಗೆ ಸಹಾಯ ಮಾಡಿ

ಅಪ್ಪಅಮ್ಮಂದಿರು ಇದನ್ನ ಹೇಗೆ ಮಾಡಬಹುದು? ಕೂಟಗಳಿಂದ ಕಲಿಯೋಕೆ ನೀವು ಮಕ್ಕಳಿಗೆ ಸಹಾಯ ಮಾಡಿ. ಮಕ್ಕಳು ಕೂಟದಲ್ಲಿ ಏನ್‌ ನೋಡ್ತಾರೋ, ಏನ್‌ ಕೇಳಿಸ್ಕೊಳ್ತಾರೋ, ಯಾವ ಉತ್ರ ಕೊಡ್ತಾರೋ ಅದ್ರಿಂದ ಯೆಹೋವನ ಬಗ್ಗೆ ತುಂಬ ಕಲಿತಾರೆ ಮತ್ತು ಆತನಿಗೆ ಹತ್ರ ಆಗ್ತಾರೆ. (ಧರ್ಮೋ 31:12, 13) ಹಾಗಾಗಿ ಕೂಟಗಳಲ್ಲಿ ಚೆನ್ನಾಗಿ ಕಲಿಯೋಕೆ ಮಕ್ಕಳಿಗೆ ಹೇಗೆ ಸಹಾಯ ಮಾಡಬಹುದು?

  • ರಾಜ್ಯ ಸಭಾಗೃಹದಲ್ಲೇ ಕೂಟಗಳಿಗೆ ಹಾಜರಾಗೋಕೆ ಆದಷ್ಟು ಪ್ರಯತ್ನ ಮಾಡಿ.—ಕೀರ್ತ 22:22.

  • ಕೂಟ ಶುರುವಾಗೋ ಮುಂಚೆ ಅಥವಾ ಕೂಟ ಮುಗಿದ ಮೇಲೆ ಸ್ವಲ್ಪ ಹೊತ್ತು ಇದ್ದು ಸಹೋದರ ಸಹೋದರಿಯರ ಜೊತೆ ಮಾತಾಡಿ.—ಇಬ್ರಿ 10:25.

  • ಕೂಟದಲ್ಲಿ ಕಲಿಬೇಕಾದ ಪುಸ್ತಕ ಪತ್ರಿಕೆಗಳು ಕುಟುಂಬದಲ್ಲಿ ಎಲ್ರ ಹತ್ರನೂ ಇರೋ ತರ ನೋಡ್ಕೊಳಿ. ಎಲೆಕ್ಟ್ರಾನಿಕ್‌ ಕಾಪಿಯಾದ್ರೂ ಇರೋ ಹಾಗೆ ನೋಡ್ಕೊಳಿ

  • ಮಕ್ಕಳೇ ಸ್ವಂತವಾಗಿ ಉತ್ರ ತಯಾರಿ ಮಾಡೋಕೆ ಸಹಾಯ ಮಾಡಿ.—ಮತ್ತಾ 21:15, 16.

  • ಕೂಟಗಳ ಬಗ್ಗೆ ಅದ್ರಲ್ಲಿ ಕಲಿಯೋ ವಿಷ್ಯಗಳ ಬಗ್ಗೆ ಯಾವಾಗ್ಲೂ ಒಳ್ಳೇದನ್ನೇ ಮಾತಾಡಿ

  • ಸಭೆಯಲ್ಲಿ ವಯಸ್ಸಾದವ್ರ ಹತ್ರ ಮಾತಾಡೋಕೆ, ರಾಜ್ಯ ಸಭಾಗೃಹ ಶುಚಿ ಮಾಡೋಕೆ ಮತ್ತು ಇನ್ನೂ ಬೇರೆ ಬೇರೆ ಕೆಲಸಗಳನ್ನ ಮಾಡೋಕೆ ಮಕ್ಕಳಿಗೆ ಕಲಿಸಿ

ಮಕ್ಕಳು ಯೆಹೋವನಿಗೆ ಹತ್ರ ಆಗೋಕೆ ನೀವು ಅವ್ರಿಗೆ ತುಂಬ ಸಹಾಯ ಮಾಡಬೇಕು. ಅದು ಕೆಲವೊಮ್ಮೆ ಕಷ್ಟ ಅನಿಸಬಹುದು. ಆದ್ರೆ ಅದನ್ನ ಮಾಡೋಕೆ ಯೆಹೋವ ನಿಮಗೆ ಸಹಾಯ ಮಾಡ್ತಾನೆ.—ಯೆಶಾ 40:29.

ಹೆತ್ತವರೇ ಯೆಹೋವನ ಸಹಾಯದಿಂದ ಸಮಸ್ಯೆಗಳನ್ನು ಜಯಿಸಿ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಜ್ಯಾಕ್‌ ಮತ್ತು ಲೇಯಗೆ ಸುಸ್ತಾಗ್ತಿದ್ರಿಂದ ಅವ್ರಿಬ್ರಿಗೂ ಏನ್‌ ಆಗ್ತಿತ್ತು?

  • ಅಪ್ಪಅಮ್ಮಂದಿರು ಯೆಹೋವನ ಹತ್ರ ‘ಶಕ್ತಿ ಕೊಡಪ್ಪಾ’ ಅಂತ ಯಾಕೆ ಬೇಡ್ಕೊಬೇಕು?

  • ಯೆಹೋವನ ಸಹಾಯ ಪಡ್ಕೊಳ್ಳೋಕೆ ಜ್ಯಾಕ್‌ ಮತ್ತು ಲೇಯ ಏನ್‌ ಮಾಡಿದ್ರು?