ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಯಾರಾದ್ರೂ ನಿಮಗೆ ತೊಂದ್ರೆ ಕೊಡ್ತಿದ್ರೆ ಯೆಹೋವನ ಹತ್ರ ಸಹಾಯ ಕೇಳಿ

ಯಾರಾದ್ರೂ ನಿಮಗೆ ತೊಂದ್ರೆ ಕೊಡ್ತಿದ್ರೆ ಯೆಹೋವನ ಹತ್ರ ಸಹಾಯ ಕೇಳಿ

ಕೆಲವರು ನಮಗೆ ತುಂಬ ತೊಂದ್ರೆ ಕೊಡ್ತಾರೆ. ನಮ್ಮ ಮನಸ್ಸಿಗೂ ನೋವು ಮಾಡ್ತಾರೆ, ದೇಹಕ್ಕೂ ಗಾಯ ಮಾಡ್ತಾರೆ. ಯೆಹೋವ ದೇವರನ್ನ ಆರಾಧಿಸೋದ್ರಿಂದ ನಮ್ಮನ್ನ ತಡಿಯೋಕೂ ಪ್ರಯತ್ನ ಮಾಡ್ತಾರೆ. ಆಗ ನಮಗೆ ತುಂಬ ಬೇಜಾರಾಗುತ್ತೆ. ಆದ್ರೆ ನಾವು ವಿರೋಧಿಗಳಿಗೆ ಹೆದರಿದ್ರೆ ಯೆಹೋವನ ಜೊತೆ ಇರೋ ಸ್ನೇಹ ಹಾಳಾಗುತ್ತೆ. ಹಾಗಾಗಿ ಈ ತರ ತೊಂದ್ರೆ ಆದಾಗ ಅದ್ರಿಂದ ತಪ್ಪಿಸ್ಕೊಳ್ಳೋಕೆ ಏನು ಮಾಡಬೇಕು?

ಹಿಂದಿನ ಕಾಲದಲ್ಲೂ ಯೆಹೋವನ ಸೇವಕರಿಗೆ ತುಂಬ ಜನ ತೊಂದ್ರೆ ಕೊಟ್ಟಿದ್ರು. ಆಗೆಲ್ಲ ಆತನ ಸೇವಕರು ಯೆಹೋವನ ಹತ್ರ ಸಹಾಯ ಕೇಳಿದ್ರು. (ಕೀರ್ತ 18:17) ಅದ್ರಲ್ಲಿ ಎಸ್ತೇರ್‌ ಕೂಡ ಒಬ್ಬಳು. ದುಷ್ಟ ಹಾಮಾನ ಮಾಡಿದ ಕುತಂತ್ರನೆಲ್ಲಾ ಅವಳು ಧೈರ್ಯದಿಂದ ಬಯಲು ಮಾಡಿದಳು. (ಎಸ್ತೇ 7:1-6) ಆದ್ರೆ ಅದನ್ನ ಮಾಡೋಕೆ ಮುಂಚೆ ಅವಳಿಗೆ ಯೆಹೋವನ ಸಹಾಯ ಬೇಕು ಅಂತ ತೋರಿಸ್ಕೊಟ್ಟಳು. ಅವಳು ಉಪವಾಸ ಮಾಡಿದಳು. (ಎಸ್ತೇ 4:14-16) ಅದನ್ನ ನೋಡಿ ಯೆಹೋವ ಆಶೀರ್ವದಿಸಿದನು. ಅವಳನ್ನ, ತನ್ನ ಜನ್ರನ್ನ ಕಾಪಾಡಿದನು.

ಯುವ ಜನ್ರೇ, ಯಾರಾದ್ರೂ ನಿಮಗೂ ತೊಂದ್ರೆ ಕೊಡ್ತಿದ್ರೆ ಯೆಹೋವನ ಹತ್ರ ಸಹಾಯ ಕೇಳಿ. ದೊಡ್ಡವರ ಹತ್ರ ಮಾತಾಡಿ. ಅಪ್ಪಅಮ್ಮ ಹತ್ರ ಮಾತಾಡಿ. ಯೆಹೋವ ಹೇಗೆ ಎಸ್ತೇರ್‌ಗೆ ಸಹಾಯ ಮಾಡಿದ್ನೋ ಖಂಡಿತ ನಿಮಗೂ ಸಹಾಯ ಮಾಡ್ತಾನೆ. ಈ ರೀತಿ ತೊಂದ್ರೆ ಆದಾಗ ನೀವು ಇನ್ನೂ ಏನೆಲ್ಲಾ ಮಾಡಬಹುದು?

ನನ್ನ ಹದಿವಯಸ್ಸಿನ ಜೀವನ—ರಾಗಿಂಗನ್ನ ಜಯಿಸೋದು ಹೇಗೆ? ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಚಾರ್ಲಿ ಮತ್ತು ಫೆರಿನ್‌ನಿಂದ ಯುವ ಜನ್ರು ಏನು ಕಲಿಬಹುದು?

  • ಈ ವಿಡಿಯೋದಲ್ಲಿ ನೋಡಿದ ಹಾಗೆ ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ಸಹಾಯ ಮಾಡಬಹುದು?