ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಕ್ಟೋಬರ್‌ 7-13

ಕೀರ್ತನೆ 92-95

ಅಕ್ಟೋಬರ್‌ 7-13

ಗೀತೆ 150 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಯೆಹೋವನ ಸೇವೆ ಮಾಡೋದೇ ಅತ್ಯುತ್ತಮ ಜೀವನ!

(10 ನಿ.)

ಯೆಹೋವನು ನಮ್ಮ ಆರಾಧನೆಗೆ ಯೋಗ್ಯನಾಗಿದ್ದಾನೆ (ಕೀರ್ತ 92:1, 4; ಕಾವಲಿನಬುರುಜು18.04 ಪುಟ 26 ಪ್ಯಾರ 5)

ತನ್ನ ಆರಾಧಕರು ಸರಿಯಾದ ನಿರ್ಧಾರ ಮಾಡಿ ಸಂತೋಷವಾಗಿ ಇರೋಕೆ ಆತನು ಸಹಾಯ ಮಾಡ್ತಾನೆ (ಕೀರ್ತ 92:5; ಕಾವಲಿನಬುರುಜು18.11 ಪುಟ 20 ಪ್ಯಾರ 8)

ವಯಸ್ಸಾಗಿರೋ ತನ್ನ ಸೇವಕರು ಮಾಡೋ ಸೇವೆಯನ್ನ ಆತನು ಅಮೂಲ್ಯವಾಗಿ ನೋಡ್ತಾನೆ (ಕೀರ್ತ 92:12-15; ಕಾವಲಿನಬುರುಜು20.01 ಪುಟ 19 ಪ್ಯಾರ 18)

ನಿಮ್ಮನ್ನೇ ಕೇಳ್ಕೊಳ್ಳಿ, ‘ಯೆಹೋವನಿಗೆ ಸಮರ್ಪಣೆ ಮಾಡ್ಕೊಂಡು ದೀಕ್ಷಾಸ್ನಾನ ತಗೊಳ್ಳೋದಕ್ಕೆ ಯಾವ ವಿಷ್ಯ ನಂಗೆ ಅಡ್ಡಿ ಆಗ್ತಿದೆ?’

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ: ಮಾತಾಡ್ತಾ ಮಾತಾಡ್ತಾ ನೀವು ಹೇಗೆ ಬೈಬಲಿನಲ್ಲಿರೋ ಒಳ್ಳೇ ವಿಷಯಗಳನ್ನ ಬೇರೆವ್ರಿಗೆ ಕಲಿಸ್ತೀರಿ ಅಂತ ಹೇಳಿ. (ಪ್ರೀತಿಸಿ-ಕಲಿಸಿ ಪಾಠ 5 ಪಾಯಿಂಟ್‌ 3)

5. ಮತ್ತೆ ಭೇಟಿ ಮಾಡಿ

(3 ನಿ.) ಅನೌಪಚಾರಿಕ ಸಾಕ್ಷಿ: ಈ ಮುಂಚೆ ಬೈಬಲ್‌ ಸ್ಟಡಿಯನ್ನ ಬೇಡ ಅಂತ ಹೇಳಿದ ಆದ್ರೆ ಈಗ ಆಸಕ್ತಿ ತೋರಿಸಿದ ವ್ಯಕ್ತಿ ಹತ್ರ ಬೈಬಲ್‌ ಸ್ಟಡಿ ಬಗ್ಗೆ ಮತ್ತೆ ಹೇಳಿ. (ಪ್ರೀತಿಸಿ-ಕಲಿಸಿ ಪಾಠ 8 ಪಾಯಿಂಟ್‌ 4)

6. ಶಿಷ್ಯರಾಗೋಕೆ ಕಲಿಸಿ

(5 ನಿ.) ಪ್ರಗತಿ ಮಾಡದೇ ಇರೋ ಬೈಬಲ್‌ ವಿದ್ಯಾರ್ಥಿ ಹತ್ರ ಚರ್ಚೆ. (ಪ್ರೀತಿಸಿ-ಕಲಿಸಿ ಪಾಠ 12 ಪಾಯಿಂಟ್‌ 5)

ನಮ್ಮ ಕ್ರೈಸ್ತ ಜೀವನ

ಗೀತೆ 110

7. ಯುವಜನರೇ, ಚಿಂತೆ ನಿಮ್ಮನ್ನ ಕಾಡ್ತಿದೆಯಾ?

(15 ನಿ.) ಚರ್ಚೆ.

ಯೆಹೋವನ ಸೇವಕರಿಗೂ ಚಿಂತೆ ಕಾಡುತ್ತೆ. ಉದಾಹರಣೆಗೆ, ದಾವೀದನಿಗೂ ತನ್ನ ಜೀವನದಲ್ಲಿ ಅನೇಕ ಸಲ ಚಿಂತೆ ಕಾಡಿತು. ಅವನಿಗಷ್ಟೇ ಅಲ್ಲ ಇವತ್ತು ನಮ್ಮ ಅನೇಕ ಸಹೋದರ ಸಹೋದರಿಯರಿಗೂ ಚಿಂತೆ ಕಾಡ್ತಿದೆ. (ಕೀರ್ತ 13:2; 139:23) ಬೇಜಾರಿನ ವಿಷ್ಯ ಏನಂದ್ರೆ ಯುವಜನರು ಕೂಡ ಈ ಚಿಂತೆ ಅನ್ನೋ ಸುಳಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಇದ್ರಿಂದ ಎಷ್ಟು ತೊಂದ್ರೆ ಆಗುತ್ತೆ ಅಂದ್ರೆ ಮಾಮೂಲಿಯಾಗಿ ಮಾಡೋ ಕೆಲ್ಸಗಳು ಅಂದ್ರೆ ಸ್ಕೂಲಿಗೆ ಹೋಗೋದು, ಕೂಟಗಳಿಗೆ ಹೋಗೋದು ಕಷ್ಟ ಅನಿಸಿಬಿಡುತ್ತೆ. ಇದು ಎಷ್ಟು ವಿಪರೀತಕ್ಕೆ ಹೋಗುತ್ತೆ ಅಂದ್ರೆ ಯುವಜನರಲ್ಲಿ ಆತಂಕ ತರುತ್ತೆ, ಆತ್ಮಹತ್ಯೆ ಮಾಡ್ಕೊಬೇಕು ಅನ್ನೋ ಯೋಚ್ನೆ ಬರೋ ತರ ಮಾಡುತ್ತೆ.

ಯುವಜನರೇ ನಿಮಗೆ ಈ ರೀತಿಯ ಚಿಂತೆ ಕಾಡ್ತಿದ್ರೆ ದಯವಿಟ್ಟು ನಿಮ್ಮ ಅಪ್ಪ ಅಮ್ಮ ಹತ್ರ ಅಥವಾ ಯಾರಾದ್ರೂ ದೊಡ್ಡವರ ಹತ್ರ ಮಾತಾಡಿ. ಸಹಾಯಕ್ಕಾಗಿ ಯೆಹೋವನ ಹತ್ರ ಪ್ರಾರ್ಥನೆ ಮಾಡೋದನ್ನ ಮರೀಬೇಡಿ. (ಫಿಲಿ 4:6) ಯಾಕಂದ್ರೆ ಆತನು ಖಂಡಿತ ನಿಮಗೆ ಸಹಾಯ ಮಾಡ್ತಾನೆ. (ಕೀರ್ತ 94:17-19; ಯೆಶಾ 41:10) ಸಹೋದರ ಸ್ಟಿಂಗ್‌ನ ಉದಾಹರಣೆ ನೋಡಿ.

ಯೆಹೋವನು ನನ್ನ ಕೈ ಹಿಡಿದು ನಡೆಸಿದನು. ವಿಡಿಯೋ ಹಾಕಿ ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

• ಸ್ಟಿಂಗ್‌ಗೆ ಯಾವ ಬೈಬಲ್‌ ವಚನ ಸಹಾಯ ಮಾಡ್ತು ಮತ್ತು ಯಾಕೆ?

• ಯೆಹೋವ ಅವನಿಗೆ ಹೇಗೆ ಸಹಾಯ ಮಾಡಿದನು?

ಹೆತ್ತವರೇ, ಚಿಂತೆ ಕಾಡ್ತಿರೋ ಮಕ್ಕಳಿಗೆ ನೀವು ಹೇಗೆ ಸಹಾಯ ಮಾಡಬಹುದು? ಅವರು ಹೇಳೋ ಮಾತನ್ನ ತಾಳ್ಮೆಯಿಂದ ಕೇಳಿಸಿಕೊಳ್ಳಿ, ನೀವು ಅವರನ್ನ ತುಂಬಾ ಪ್ರೀತಿಸ್ತೀರಿ ಅಂತ ಹೇಳಿ, ಯೆಹೋವನೂ ಅವರನ್ನ ತುಂಬಾ ಪ್ರೀತಿಸ್ತಾನೆ ಅಂತ ಅವ್ರಿಗೆ ಅರ್ಥ ಮಾಡಿಸಿ. (ತೀತ 2:4; ಯಾಕೋ 1:19) ನಿಮ್ಮ ಮಕ್ಕಳಿಗೆ ಸಹಾಯ ಮಾಡೋಕೆ ಬೇಕಾದ ಬಲ ಮತ್ತು ಸಾಂತ್ವನಕ್ಕಾಗಿ ಯೆಹೋವನ ಮೇಲೆ ಆತುಕೊಳ್ಳಿ.

ಸಭೆಯಲ್ಲಿ ಯಾರಾದ್ರೂ ಒಬ್ಬರು ಚಿಂತೆ, ಭಯದಿಂದ ಕುಗ್ಗಿ ಹೋಗಿರಬಹುದು, ಅವ್ರಿಗೆ ಎಷ್ಟು ಕಷ್ಟ ಆಗ್ತಿದೆ ಅಂತ ನಮಗೆ ಅರ್ಥ ಆಗದೇ ಇರಬಹುದು. ಆದ್ರೆ ನಾವು ಎಲ್ಲರನ್ನ ಪ್ರೀತಿಸೋ ಮೂಲಕ ಅವ್ರಿಗೆ ಸಹಾಯ ಮಾಡಬಹುದು.—ಜ್ಞಾನೋ 12:25; ಇಬ್ರಿ 10:24.

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 140 ಮತ್ತು ಪ್ರಾರ್ಥನೆ