ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೆಪ್ಟೆಂಬರ್‌ 16-22

ಕೀರ್ತನೆ 85-87

ಸೆಪ್ಟೆಂಬರ್‌ 16-22

ಗೀತೆ 56 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ತಾಳ್ಕೊಳ್ಳೋಕೆ ಪ್ರಾರ್ಥನೆ ಸಹಾಯ ಮಾಡುತ್ತೆ

(10 ನಿ.)

ಖುಷಿಯಿಂದ ಇರೋಕೆ ಸಹಾಯ ಮಾಡು ಅಂತ ಯೆಹೋವನ ಹತ್ರ ಕೇಳಿ (ಕೀರ್ತ 86:4)

ನಂಬಿಗಸ್ತಿಕೆಯಿಂದ ಇರೋಕೆ ಸಹಾಯ ಮಾಡು ಅಂತಾನೂ ಯೆಹೋವನ ಹತ್ರ ಕೇಳಿ (ಕೀರ್ತ 86:11, 12; ಕಾವಲಿನಬುರುಜು12 5/15 ಪುಟ 25 ಪ್ಯಾರ 10)

ಯೆಹೋವ ನಿಮ್ಮ ಪ್ರಾರ್ಥನೆಯನ್ನ ಕೇಳಿ ಉತ್ತರ ಕೊಡ್ತಾನೆ ಅಂತ ನಂಬಿ (ಕೀರ್ತ 86:6, 7; ಕಾವಲಿನಬುರುಜು23.05 ಪುಟ 13 ಪ್ಯಾರ 17-18)


ನಿಮ್ಮನ್ನೇ ಕೇಳ್ಕೊಳ್ಳಿ, ಸಮಸ್ಯೆಗಳು ಬಂದಾಗ ನಾನು ಜಾಸ್ತಿ ಹೊತ್ತು ಮತ್ತು ಜಾಸ್ತಿ ಸಲ ಯೆಹೋವನ ಹತ್ರ ಮಾತಾಡ್ತೀನಾ?—ಕೀರ್ತ 86:3.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 86:11—ದಾವೀದ ಮಾಡಿದ ಪ್ರಾರ್ಥನೆಯಿಂದ ಹೃದಯದ ಬಗ್ಗೆ ಏನು ಗೊತ್ತಾಗುತ್ತೆ? (it-1-E ಪುಟ 1058 ಪ್ಯಾರ 5)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಅನೌಪಚಾರಿಕ ಸಾಕ್ಷಿ: ಬೈಬಲ್‌ ಸ್ಟಡಿ ಬಗ್ಗೆ ಹೇಳಿ. (ಪ್ರೀತಿಸಿ-ಕಲಿಸಿ ಪಾಠ 3 ಪಾಯಿಂಟ್‌ 5)

5. ಮತ್ತೆ ಭೇಟಿ ಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ: ಹೋದ ಸಲ ಮಾತಾಡಿದಾಗ ಸುತ್ತಮುತ್ತ ನಡೀತಿರೋ ಘಟನೆಗಳ ಬಗ್ಗೆ ಚಿಂತಿಸ್ತಿದ್ದ ವ್ಯಕ್ತಿಗೆ ಬೈಬಲ್‌ ಸ್ಟಡಿ ಬಗ್ಗೆ ಹೇಳಿ. (ಪ್ರೀತಿಸಿ-ಕಲಿಸಿ ಪಾಠ 7 ಪಾಯಿಂಟ್‌ 4)

6. ಶಿಷ್ಯರಾಗೋಕೆ ಕಲಿಸಿ

(5 ನಿ.) ಖುಷಿಯಾಗಿ ಬಾಳೋಣ ಪಾಠ 15 ಪಾಯಿಂಟ್‌ 5. ಮುಂದಿನ ವಾರ ನೀವು ಇಲ್ಲದೇ ಇರೋದ್ರಿಂದ ಸ್ಟಡಿ ಮುಂದುವರಿಸೋಕೆ ಯಾವ ಏರ್ಪಾಡುಗಳನ್ನ ಮಾಡಿದ್ದೀರ ಅಂತ ವಿದ್ಯಾರ್ಥಿ ಹತ್ರ ಚರ್ಚೆ ಮಾಡಿ. (ಪ್ರೀತಿಸಿ-ಕಲಿಸಿ ಪಾಠ 10 ಪಾಯಿಂಟ್‌ 4)

ನಮ್ಮ ಕ್ರೈಸ್ತ ಜೀವನ

ಗೀತೆ 103

7. ಪ್ರಯತ್ನ ಬಿಡಬೇಡಿ

(5 ನಿ.) ಚರ್ಚೆ.

ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

  • ಸೇವೆ ಮಾಡೋವಾಗ ಕೆಲವು ಸಲ ‘ಸಾಕಾಯ್ತಪ್ಪಾ’ ಅಂತ ಯಾಕೆ ಅನಿಸುತ್ತೆ?

  • ನಾವು ಯಾಕೆ ಪ್ರಯತ್ನ ಬಿಡಬಾರದು?

8. ಬೈಬಲ್‌ ಸ್ಟಡಿ ಶುರು ಮಾಡೋಕೆ ಪ್ರಯತ್ನ ಪಡ್ತಾ ಇರಿ!

(10 ನಿ.) ಚರ್ಚೆ.

ಈ ತಿಂಗಳು ನಡೆದ ವಿಶೇಷ ಅಭಿಯಾನದಲ್ಲಿ ಎಂದೆಂದೂ ಖುಷಿಯಾಗಿ ಬಾಳೋಣ! ಅನ್ನೋ ಕಿರುಹೊತ್ತಿಗೆಯನ್ನ ಬಳಸಿ ನೀವು ಯಾವುದಾದ್ರೂ ಬೈಬಲ್‌ ಸ್ಟಡಿಯನ್ನ ಶುರುಮಾಡಿದ್ರಾ? ಒಂದುವೇಳೆ ಶುರುಮಾಡಿದ್ರೆ ನಿಮಗೆ ಗ್ಯಾರಂಟಿ ತುಂಬ ಖುಷಿಯಾಗಿರುತ್ತೆ. ಅಷ್ಟೇ ಅಲ್ಲ, ನಿಮ್ಮಿಂದ ಬೇರೆಯವ್ರಿಗೂ ಪ್ರೋತ್ಸಾಹ ಸಿಕ್ಕಿರುತ್ತೆ. ಆದ್ರೆ ಬೈಬಲ್‌ ಸ್ಟಡಿಯನ್ನ ಶುರುಮಾಡೋಕೆ ಆಗಿಲ್ಲಾಂದ್ರೆ ‘ನಾನು ಹಾಕಿದ ಪ್ರಯತ್ನವೆಲ್ಲಾ ವ್ಯರ್ಥ’ ಅಂತ ನಿಮಗೆ ಅನಿಸ್ತಿರಬಹುದು. ನಿಮಗೆ ಒಳ್ಳೆ ಪ್ರತಿಫಲ ಸಿಗದೆ ನಿರುತ್ಸಾಹ ಆಗಿದ್ರೆ ಏನು ಮಾಡಬೇಕು?

ನಾವು ತಾಳ್ಮೆಯಿಂದ “ದೇವರ ಸೇವಕರು ಅಂತ ತೋರಿಸ್ಕೊಡ್ತಾ ಇದ್ದೀವಿ” ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ನಾವು ಸಿಹಿಸುದ್ದಿ ಸಾರೋಕೆ ಹಾಕೋ ಪ್ರಯತ್ನ “ಗಾಳಿಗೆ ಹೋಗ್ತಿದೆ” ಅಂತ ಅನಿಸುವಾಗ 2 ಕೊರಿಂಥ 6:4, 6 ನಮಗೆ ಹೇಗೆ ಸಹಾಯ ಮಾಡುತ್ತೆ?

  • ಬೈಬಲ್‌ ಸ್ಟಡಿ ಶುರುಮಾಡೋಕೆ ನೀವು ಹಾಕಿದ ಪ್ರಯತ್ನಕ್ಕೆ ಫಲ ಸಿಗದೆ ಹೋದಾಗ ನೀವು ಯಾವ ಬದಲಾವಣೆಗಳನ್ನ ಮಾಡ್ತೀರ?

ನಾವು ಎಷ್ಟು ಬೈಬಲ್‌ ಸ್ಟಡಿಗಳನ್ನ ಶುರು ಮಾಡ್ತೀವಿ ಅನ್ನೋದ್ರ ಮೇಲೆ ಅಥವಾ ನಮಗೆ ಎಷ್ಟು ಬೈಬಲ್‌ ಸ್ಟಡಿ ಇದೆ ಅನ್ನೋದ್ರ ಮೇಲೆ ನಮ್ಮ ಖುಷಿ ಹೊಂದ್ಕೊಂಡಿಲ್ಲ. ಬದಲಿಗೆ ನಾವು ಹಾಕೋ ಪ್ರಯತ್ನವನ್ನ ನೋಡಿ ಯೆಹೋವ ಖುಷಿಪಡ್ತಾನೆ ಅನ್ನೋದ್ರ ಮೇಲೆ ಹೊಂದ್ಕೊಂಡಿದೆ. ಈ ವಿಷ್ಯವನ್ನ ನಾವು ಯಾವಾಗ್ಲೂ ನೆನಪಲ್ಲಿ ಇಟ್ಕೊಬೇಕು. (ಲೂಕ 10:17-20) ಹಾಗಾಗಿ ಈ ವಿಶೇಷ ಅಭಿಯಾನದಲ್ಲಿ ಭಾಗವಹಿಸೋಕೆ ನಿಮ್ಮ ಕೈಲಾಗೋದನ್ನೆಲ್ಲಾ ಮಾಡಿ. ಯಾಕಂದ್ರೆ “ನೀವು ಒಡೆಯನಿಗಾಗಿ ಮಾಡೋ ಕೆಲಸ ವ್ಯರ್ಥ ಆಗಲ್ಲ.”— 1ಕೊರಿಂ 15:58.

9. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 4 ಮತ್ತು ಪ್ರಾರ್ಥನೆ