ಸೆಪ್ಟೆಂಬರ್ 2-8
ಕೀರ್ತನೆ 79-81
ಗೀತೆ 34 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ಯೆಹೋವನ ಹೆಸ್ರನ್ನ ಗೌರವಿಸಿ ಮತ್ತು ಪ್ರೀತಿಸಿ
(10 ನಿ.)
ಯೆಹೋವನಿಗೆ ಅಗೌರವ ತರೋ ವಿಷಯಗಳನ್ನ ಮಾಡಬೇಡಿ (ಕೀರ್ತ 79:9; ಕಾವಲಿನಬುರುಜು17.02 ಪುಟ 9 ಪ್ಯಾರ 5)
ಯೆಹೋವನ ಹೆಸರು ಹೇಳಿ ಪ್ರಾರ್ಥಿಸಿ (ಕೀರ್ತ 80:18; ijwbv ಲೇಖನ 3 ಪ್ಯಾರ 4-5)
ಆತನ ಮಾತನ್ನ ಕೇಳೋದ್ರ ಮೂಲಕ ದೇವರ ಹೆಸರನ್ನ ಪ್ರೀತಿಸ್ತೀವಿ ಅಂತ ತೋರಿಸಬಹುದು, ಇಂಥವರನ್ನ ಯೆಹೋವ ತುಂಬಾ ಆಶೀರ್ವಾದ ಮಾಡ್ತಾನೆ (ಕೀರ್ತ 81:13, 16)
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
-
ಕೀರ್ತ 80:1—ಇಸ್ರಾಯೇಲಿನ ಎಲ್ಲಾ ಕುಲಗಳನ್ನು ಸೂಚಿಸಲು ಕೆಲವು ಸಲ ಯಾಕೆ ಯೋಸೇಫನ ಹೆಸರನ್ನ ಬಳಲಾಗಿದೆ? (it-2-E ಪುಟ 111)
-
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಕೀರ್ತ 79:1–80:7 (ಪ್ರಗತಿ ಪಾಠ 10)
4. ಸಂಭಾಷಣೆ ಶುರು ಮಾಡಿ
(1 ನಿ.) ಮನೆ ಮನೆ ಸೇವೆ. ಬೈಬಲ್ ಸ್ಟಡಿ ಬಗ್ಗೆ ಹೇಳಿ. (ಪ್ರೀತಿಸಿ-ಕಲಿಸಿ ಪಾಠ 4 ಪಾಯಿಂಟ್ 4)
5. ಸಂಭಾಷಣೆ ಶುರು ಮಾಡಿ
(3 ನಿ.) ಅನೌಪಚಾರಿಕ ಸಾಕ್ಷಿ. ಬೈಬಲ್ ಸ್ಟಡಿ ಬಗ್ಗೆ ಹೇಳಿ. (ಪ್ರೀತಿಸಿ-ಕಲಿಸಿ ಪಾಠ 4 ಪಾಯಿಂಟ್ 3)
6. ಸಂಭಾಷಣೆ ಶುರು ಮಾಡಿ
(2 ನಿ.) ಸಾರ್ವಜನಿಕ ಸಾಕ್ಷಿ. ಬೈಬಲ್ ಸ್ಟಡಿ ಬಗ್ಗೆ ಹೇಳಿ. (ಪ್ರೀತಿಸಿ-ಕಲಿಸಿ ಪಾಠ 3 ಪಾಯಿಂಟ್ 3)
7. ಮತ್ತೆ ಭೇಟಿ ಮಾಡಿ
(5 ನಿ.) ಮನೆ ಮನೆ ಸೇವೆ. ಈ ಹಿಂದೆ ಬೇಡ ಅಂತ ಹೇಳಿ ಈಗ ಆಸಕ್ತಿ ತೋರಿಸಿದ ವ್ಯಕ್ತಿಗೆ ಬೈಬಲ್ ಸ್ಟಡಿ ಬಗ್ಗೆ ಹೇಳಿ. (ಪ್ರೀತಿಸಿ-ಕಲಿಸಿ ಪಾಠ 8 ಪಾಯಿಂಟ್ 3)
ಗೀತೆ 9
8. “ಅವರು ನನ್ನ ಹೆಸ್ರನ್ನ ಗೌರವಿಸ್ತಾರೆ”
(15 ನಿ.) ಚರ್ಚೆ.
ಏದೆನ್ ತೋಟದಲ್ಲಿ ಸೈತಾನ ಯೆಹೋವನ ಹೆಸರಿಗೆ ಮಸಿ ಬಳಿದ. ಅಲ್ಲಿಂದ ಮಾನವರು ಮತ್ತು ದೇವದೂತರು ದೇವರ ಹೆಸರಿಗೆ ಗೌರವ ತರಬೇಕಾ ಬೇಡ್ವಾ ಅನ್ನೋ ಪ್ರಾಮುಖ್ಯ ನಿರ್ಧಾರ ಮಾಡಬೇಕಾಗಿದೆ.
ಸೈತಾನ ಯೆಹೋವ ದೇವರ ಬಗ್ಗೆ ಹಬ್ಬಿಸಿರೋ ಕೆಲವು ಸುಳ್ಳುಗಳು ಹೀಗಿವೆ. ದೇವರು ಒಬ್ಬ ಕೆಟ್ಟವನು ಮತ್ತು ಆತನು ಕ್ರೂರವಾಗಿ ಆಳ್ವಿಕೆ ಮಾಡ್ತಾನೆ. (ಆದಿ 3:1-6; ಯೋಬ 4:18, 19) ಯೆಹೋವನ ಸೇವಕರು ಆತನನ್ನ ನಿಜವಾಗಲೂ ಪ್ರೀತಿಸಲ್ಲ ಅನ್ನೋ ಆರೋಪ ಹಾಕಿದ್ದಾನೆ. (ಯೋಬ 2:4, 5) ನಮ್ಮ ಸುತ್ತಮುತ್ತ ಇರೋ ಈ ಸುಂದರ ಸೃಷ್ಟಿಯನ್ನ ಯೆಹೋವ ಸೃಷ್ಟಿ ಮಾಡಿಲ್ಲ ಅಂತ ಲಕ್ಷಾಂತರ ಜನರು ನಂಬೋ ತರ ಮಾಡಿದ್ದಾನೆ.—ರೋಮ 1:20, 21.
ಈ ಸುಳ್ಳುಗಳನ್ನ ಕೇಳಿದಾಗ ನಿಮಗೆ ಹೇಗನಿಸುತ್ತೆ? ಇದೆಲ್ಲಾ ಸುಳ್ಳು ಅಂತ ಸಾಬೀತು ಮಾಡಬೇಕು ಯೆಹೋವನ ಪರವಾಗಿ ನಿಲ್ಲಬೇಕು ಅನ್ಸುತ್ತೆ ಅಲ್ವಾ? ಆತನ ಹೆಸರನ್ನ ಪವಿತ್ರೀಕರಿಸೋಕೆ ತನ್ನ ಜನರು ಇಷ್ಟಪಡ್ತಾರೆ ಅಂತ ಆತನಿಗೆ ಗೊತ್ತು. (ಯೆಶಾಯ 29:23, ಹೋಲಿಸಿ) ಹಾಗಾದ್ರೆ ನಾವು ಏನು ಮಾಡಬಹುದು?
-
ಯೆಹೋವನ ಬಗ್ಗೆ ತಿಳ್ಕೊಳ್ಳೋಕೆ ಮತ್ತು ಪ್ರೀತಿಸೋಕೆ ಬೇರೆಯವರಿಗೆ ಸಹಾಯ ಮಾಡಿ. (ಯೋಹಾ 17:25, 26) ಆತನು ನಿಜವಾಗ್ಲೂ ಇದ್ದಾನೆ ಮತ್ತು ಆತನಲ್ಲಿ ಸುಂದರ ಗುಣಗಳಿವೆ ಅನ್ನೋದನ್ನ ತಿಳಿಸೋಕೆ ಯಾವಾಗ್ಲೂ ರೆಡಿ ಇರಿ.—ಯೆಶಾ 63:7
-
ಪೂರ್ಣ ಹೃದಯದಿಂದ ಯೆಹೋವನನ್ನ ಪ್ರೀತಿಸಿ. (ಮತ್ತಾ 22:37, 38) ನಿಮಗೆ ಒಳ್ಳೇದಾಗತ್ತೆ ಅನ್ನೋ ಕಾರಣಕ್ಕೆ ಮಾತ್ರ ಯೆಹೋವನ ನೀತಿ ನಿಯಮಗಳನ್ನ ಪಾಲಿಸದೆ ಆತನ ಮನಸ್ಸನ್ನ ಖುಷಿಪಡಿಸೋಕೆ ಪಾಲಿಸ್ತಿದ್ದೀರ ಅಂತ ತೋರಿಸಿ.—ಜ್ಞಾನೋ 27:11
ನೀವು ಪ್ರೀತಿ ತೋರಿಸಿ . . . ಶಾಲೆಯಲ್ಲಿ ಒತ್ತಡವಿದ್ದರೂ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:
-
ಎರೀಯಲ್ ಮತ್ತು ಡ್ಯೇಗೋ ಯೆಹೋವನ ಮನಸ್ಸನ್ನ ಹೇಗೆ ಖುಷಿಪಡಿಸಿದ್ರು?
-
ಯೆಹೋವನ ಪರವಾಗಿ ನಿಲ್ಲೋಕೆ ಅವ್ರಿಗೆ ಏನು ಸಹಾಯ ಮಾಡಿತು?
-
ಅವರ ಮಾದರಿಯನ್ನ ನೀವು ಹೇಗೆ ಅನುಕರಿಸಬಹುದು?
9. ಸಭಾ ಬೈಬಲ್ ಅಧ್ಯಯನ
(30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 15 ಪ್ಯಾರ 1-7, ಮತ್ತು ವಿಭಾಗ 6ರ ಪರಿಚಯ