ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಮಕ್ಕಳು ಬಾಗಿಲು ತೆರೆದಾಗ

ಮಕ್ಕಳು ಬಾಗಿಲು ತೆರೆದಾಗ

ಸೇವೆಯಲ್ಲಿ ಚಿಕ್ಕ ಮಕ್ಕಳು ಬಾಗಿಲನ್ನು ತೆರೆದರೆ, ಅವರ ಹೆತ್ತವರ ಹತ್ತಿರ ಮಾತಾಡಬಹುದಾ ಅಂತ ಕೇಳಬೇಕು. ಆಗ ಅವರ ಕುಟುಂಬದ ತಲೆಗೆ ಗೌರವ ಕೊಟ್ಟಂತಾಗುತ್ತದೆ. (ಜ್ಞಾನೋ 6:20) ಒಂದುವೇಳೆ ಚಿಕ್ಕ ಮಕ್ಕಳು ‘ಒಳಗೆ ಬನ್ನಿ’ ಎಂದು ಹೇಳಿದರೆ ಒಳಗೆ ಹೋಗಬಾರದು. ಅವರ ಹೆತ್ತವರು ಮನೆಯಲ್ಲಿಲ್ಲದಿದ್ದರೆ ಬೇರೊಂದು ಸಮಯದಲ್ಲಿ ಹೋಗಬೇಕು.

ಮಕ್ಕಳು 14⁠ರಿಂದ 19ವಯಸ್ಸಿನವರಾಗಿದ್ದರೆ, ಆಗ ಸಹ ಅವರ ಹೆತ್ತವರನ್ನು ಕರೆಯುವಂತೆ ಹೇಳುವುದು ಉತ್ತಮ. ಹೆತ್ತವರು ಇಲ್ಲದಿದ್ದರೆ, ‘ನೀವು ಯಾವುದನ್ನು ಓದಬಹುದೆಂದು ನೀವೇ ನಿರ್ಣಯ ಮಾಡಲು ನಿಮ್ಮ ಅಪ್ಪ-ಅಮ್ಮ ಅನುಮತಿಸುತ್ತಾರಾ?’ ಎಂದು ಕೇಳಬೇಕು. ಅನುಮತಿಸುತ್ತಾರಾದರೆ, ನಾವು ಅವರಿಗೆ ಸಾಹಿತ್ಯವನ್ನು ಕೊಡಬಹುದು ಅಥವಾ jw.org ವೆಬ್‌ಸೈಟನ್ನು ತೋರಿಸಬಹುದು.

ಆಸಕ್ತಿ ತೋರಿಸಿದ ಯುವ ಪ್ರಾಯದ ಮಕ್ಕಳಿಗೆ ಪುನರ್ಭೇಟಿ ಮಾಡುವಾಗ, ಅವರ ಹೆತ್ತವರನ್ನು ಭೇಟಿಯಾಗಲು ಬಯಸುತ್ತೇವೆಂದು ಎಂದು ಹೇಳಬೇಕು. ಹೀಗೆ ಮಾಡುವುದರಿಂದ ನಾವು ಯಾಕೆ ಬಂದಿದ್ದೇವೆ ಎಂದು ಅವರಿಗೆ ವಿವರಿಸಲು ಅವಕಾಶ ಸಿಗುತ್ತದೆ. ಮಾತ್ರವಲ್ಲ, ಕುಟುಂಬಗಳಿಗಾಗಿ ಬೈಬಲ್‌ ಕೊಡುವ ಸಲಹೆ ಎಷ್ಟು ಭರವಸಾರ್ಹ ಎಂದು ತೋರಿಸಲು ಸಾಧ್ಯವಾಗುತ್ತದೆ. (ಕೀರ್ತ 119:86, 138) ನಾವು ಹೆತ್ತವರಿಗೆ ಗೌರವ ಮತ್ತು ಪರಿಗಣನೆ ತೋರಿಸುವಾಗ ಅವರಿಗದು ಉತ್ತಮ ಸಾಕ್ಷಿಯಾಗಿರುತ್ತದೆ ಮತ್ತು ಸುವಾರ್ತೆಯನ್ನು ಕುಟುಂಬದವರಿಗೆ ತಿಳಿಸಲು ಅವರು ಅನುಮತಿ ನೀಡಬಹುದು.—1ಪೇತ್ರ 2:12.