ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾದರಿ ನಿರೂಪಣೆಗಳು

ಮಾದರಿ ನಿರೂಪಣೆಗಳು

ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? (T-34 ಮುಖಪುಟ)

ಪ್ರಶ್ನೆ: [ಸ್ಥಳೀಯವಾಗಿ ನಡೆದ ಯಾವುದಾದರೊಂದು ದುರ್ಘಟನೆಯ ಬಗ್ಗೆ ತಿಳಿಸಿ ಈ ಟ್ರ್ಯಾಕ್ಟ್‌ನ ಶೀರ್ಷಿಕೆಯನ್ನು ತೋರಿಸುತ್ತಾ ಹೀಗೆ ಕೇಳಿ] ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? ನಿಮಗೆ ಏನನಿಸುತ್ತೆ? ಇದೆ? ಇಲ್ಲ? ಇರಬಹುದೇನೋ?

ವಚನ: ಕೀರ್ತನೆ 37:9-11

ಕರಪತ್ರ ಕೊಡುವಾಗ ಹೀಗೆ ಹೇಳಿ: ಕಷ್ಟಗಳು ಖಂಡಿತ ಕೊನೆಯಾಗುತ್ತವೆಂದು ನಾವು ಯಾಕೆ ನಂಬಬಹುದು ಅಂತ ಈ ಟ್ರ್ಯಾಕ್ಟ್‌ ವಿವರಿಸುತ್ತೆ.

ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? (T-34 ಕೊನೆಯ ಪುಟ)

ಪ್ರಶ್ನೆ: ನಮ್ಮ ಸುತ್ತಮುತ್ತಲು ನಡೆಯುತ್ತಿರುವ ಕೆಟ್ಟ ವಿಷಯಗಳಿಂದ ಅಮಾಯಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕಷ್ಟಗಳನ್ನು ದೇವರು ಯಾಕೆ ಹೀಗೇ ಬಿಟ್ಟಿದ್ದಾರೆ? ನಿಮಗೆ ಏನನಿಸುತ್ತೆ?

ವಚನ: 2ಪೇತ್ರ 3:9

ಕರಪತ್ರ ಕೊಡುವಾಗ ಹೀಗೆ ಹೇಳಿ: ಈ ಕಷ್ಟಗಳು ತುಂಬಾ ಬೇಗ ಕೊನೆಯಾಗುತ್ತವೆ ಅನ್ನೋದಕ್ಕಿರುವ ಎರಡು ಕಾರಣಗಳ ಬಗ್ಗೆ ಈ ಟ್ರ್ಯಾಕ್ಟ್‌ನಲ್ಲಿ ತಿಳಿಸಲಾಗಿದೆ.

ಸತ್ಯವನ್ನು ಕಲಿಸಿ

ಪ್ರಶ್ನೆ: ದೇವರು ನಮ್ಮ ಬಗ್ಗೆ ನಿಜವಾಗಲೂ ಚಿಂತೆ ಮಾಡ್ತಾನಾ ಅಂತ ನಾವು ಹೇಗೆ ತಿಳಿದುಕೊಳ್ಳೋದು?

ವಚನ: 1ಪೇತ್ರ 5:7

ಸತ್ಯ: ದೇವರಿಗೆ ನಮ್ಮ ಬಗ್ಗೆ ಚಿಂತೆ ಇರೋದರಿಂದಲೇ ನಾವು ಆತನಿಗೆ ಪ್ರಾರ್ಥಿಸುವಂತೆ ಕೇಳಿಕೊಳ್ಳುತ್ತಾನೆ.

ನಿಮ್ಮ ಸ್ವಂತ ನಿರೂಪಣೆಯನ್ನು ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.