ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಯೋಹಾನ 3-4

ಯೇಸು ಸಮಾರ್ಯದ ಸ್ತ್ರೀಗೆ ಸಾಕ್ಷಿಕೊಡುತ್ತಾನೆ

ಯೇಸು ಸಮಾರ್ಯದ ಸ್ತ್ರೀಗೆ ಸಾಕ್ಷಿಕೊಡುತ್ತಾನೆ

4:6-26, 39-41

ಯೇಸು ಅನೌಪಚಾರಿಕವಾಗಿ ಸಾಕ್ಷಿಕೊಡಲು ಹೇಗೆ ಸಾಧ್ಯವಾಯಿತು?

  • 4:7—ಯೇಸು ರಾಜ್ಯದ ಬಗ್ಗೆ ಅಥವಾ ತಾನು ಮೆಸ್ಸೀಯ ಅನ್ನುವುದರ ಬಗ್ಗೆ ಮಾತಾಡದೆ “ಕುಡಿಯಲು ನೀರು ಕೊಡು” ಎಂದು ಕೇಳಿ ಸಂಭಾಷಣೆ ಆರಂಭಿಸಿದನು

  • 4:9—ಸಮಾರ್ಯದ ಸ್ತ್ರೀ ಬೇರೆ ಜನಾಂಗಕ್ಕೆ ಸೇರಿದವಳು ಎಂದು ಪೂರ್ವಗ್ರಹ ತೋರಿಸಲಿಲ್ಲ

  • 4:9, 12—ವಾಗ್ವಾದಕ್ಕೆ ನಡೆಸುವ ವಿಷಯದ ಬಗ್ಗೆ ಅವಳು ಕೇಳಿದಾಗ ಸಂಭಾಷಣೆಯನ್ನು ಸರಿಯಾದ ದಿಕ್ಕಿನಲ್ಲಿ ನಡಿಸಿದನು.—“ನನ್ನನ್ನು ಹಿಂಬಾಲಿಸಿರಿ” ಪುಟ 77 ಪ್ಯಾರ 3

  • 4:10—ಅವಳ ದಿನನಿತ್ಯದ ಜೀವನಕ್ಕೆ ಸಂಬಂಧಪಟ್ಟ ದೃಷ್ಟಾಂತದಿಂದ ಸಂಭಾಷಣೆ ಆರಂಭಿಸಿದನು

  • 4:16-19—ಅವಳು ಅನೈತಿಕ ಜೀವನ ನಡೆಸುತ್ತಿದ್ದರೂ ಗೌರವದಿಂದ ಮಾತಾಡಿಸಿದನು

ಅನೌಪಚಾರಿಕವಾಗಿ ಸಾಕ್ಷಿಕೊಡುವುದು ಪ್ರಾಮುಖ್ಯ ಎಂದು ಈ ವೃತ್ತಾಂತದಿಂದ ಹೇಗೆ ಗೊತ್ತಾಗುತ್ತದೆ?