ನಮ್ಮ ಕ್ರೈಸ್ತ ಜೀವನ
ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸಾಕ್ಷಿಕೊಡಲು ಸಹಾಯಮಾಡುವ ಸಂಭಾಷಣೆಗಳು
ಯೇಸು ಸಮಾರ್ಯದ ಸ್ತ್ರೀಯನ್ನು ಮಾತಾಡಿಸಲು ಪ್ರಯತ್ನಿಸಿದ್ದರಿಂದ ಅನೌಪಚಾರಿಕವಾಗಿ ಸಾಕ್ಷಿಕೊಡಲು ಸಾಧ್ಯವಾಯಿತು. ಅಪರಿಚಿತರೊಂದಿಗೆ ಸಂಭಾಷಣೆಯನ್ನು ಆರಂಭಿಸುವ ಕೌಶಲವನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು?
-
ಸ್ನೇಹಭಾವದಿಂದ ಮಾತಾಡಿ. ಆಯಾಸವಾಗಿದ್ದರೂ “ನೀರು ಕೊಡು” ಎಂದು ಕೇಳುತ್ತಾ ಯೇಸು ಮಾತು ಆರಂಭಿಸಿದನು. ನೀವು ಸಹ ಮಾತು ಆರಂಭಿಸುವಾಗ ಮುಗುಳ್ನಗೆ ಬೀರಿ. ನಂತರ ಹವಾಮಾನದ ಬಗ್ಗೆ ಅಥವಾ ಇತ್ತೀಚೆಗೆ ನಡೆದ ಘಟನೆಯ ಬಗ್ಗೆ ಮಾತಾಡಬಹುದು. ಸಂಭಾಷಣೆಯನ್ನು ಆರಂಭಿಸುವುದಷ್ಟೆ ನಿಮ್ಮ ಮೊದಲ ಗುರಿಯಾಗಿರಲಿ. ಹಾಗಾಗಿ ನೀವು ಮಾತಾಡಲು ಬಯಸುವ ವ್ಯಕ್ತಿಗೆ ಯಾವ ವಿಷಯ ಇಷ್ಟ ಆಗಬಹುದು ಅಂತ ಯೋಚಿಸಿ ಅದರ ಬಗ್ಗೆ ಮಾತು ಆರಂಭಿಸಿ. ಅವರು ಪ್ರತಿಕ್ರಿಯಿಸಲಿಲ್ಲ ಅಂದರೆ ಪರ್ವಾಗಿಲ್ಲ, ಇನ್ನೊಬ್ಬರ ಜೊತೆ ಮಾತಾಡಲು ಪ್ರಯತ್ನಿಸಿ.ಧೈರ್ಯ ಕೊಡುವಂತೆ ಯೆಹೋವನನ್ನು ಕೇಳಿ.—ನೆಹೆ 2:4; ಅಕಾ 4:29.
-
ಮಾತಾಡುತ್ತಿರುವಾಗ ಸುವಾರ್ತೆಯನ್ನು ಹೇಳಲು ಸೂಕ್ತ ಸಂದರ್ಭಕ್ಕಾಗಿ ಕಾಯಿರಿ, ಅವಸರಪಡಬೇಡಿ. ನಿಮ್ಮಿಬ್ಬರ ಮಧ್ಯೆ ಸಂಭಾಷಣೆ ಸ್ವಲ್ಪ ಹೊತ್ತು ನಡೆಯಲಿ. ನೀವು ಅವಸರದಿಂದ ಸಾಕ್ಷಿಕೊಟ್ಟರೆ ಅವರಿಗೆ ಇಷ್ಟವಾಗದೆ ಸಂಭಾಷಣೆನೇ ನಿಂತುಹೋಗಬಹುದು. ಸಾಕ್ಷಿಕೊಡುವ ಮುಂಚೆನೇ ಸಂಭಾಷಣೆ ಮುಗಿದುಹೋದರೆ ಬೇಜಾರಾಗಬೇಡಿ. ಅನೌಪಚಾರಿಕ ಸಾಕ್ಷಿಕೊಡಲು ಭಯವಾದರೆ, ಸಾಕ್ಷಿಕೊಡುವ ಉದ್ದೇಶ ಬಿಟ್ಟು ಜನರ ಹತ್ತಿರ ಮಾತುಕತೆ ಆರಂಭಿಸುವುದನ್ನು ಅಭ್ಯಾಸಮಾಡಿ. [1ನೇ ವಿಡಿಯೋ ಹಾಕಿ ಚರ್ಚಿಸಿ.]
-
ಸಾಕ್ಷಿಕೊಡಲು ಅವಕಾಶವನ್ನು ಸೃಷ್ಟಿಸಬಹುದು. ಬೈಬಲಿನಲ್ಲಿರುವ ಯಾವುದೋ ಒಂದು ಬೋಧನೆ ನಿಮಗೆ ತುಂಬ ಇಷ್ಟ ಎಂದು ಹೇಳಿ. ಅದನ್ನು ಕೇಳಿ ಅವರು ಅದರ ಅರ್ಥ ಕೇಳಬಹುದು. ಯೇಸು ಇದನ್ನೇ ಮಾಡಿದನು. ಆಗ ಸಮಾರ್ಯದ ಸ್ತ್ರೀ ಕೆಲವು ಪ್ರಶ್ನೆಗಳನ್ನು ಕೇಳಿದಳು. ಯೇಸು ಸುವಾರ್ತೆ ಬಗ್ಗೆ ಮಾತಾಡಿದಾಗ ಆ ಸ್ತ್ರೀ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವಂತಿತ್ತು ಅಷ್ಟೆ. [2ನೇ ವಿಡಿಯೋ ಹಾಕಿ ಚರ್ಚಿಸಿ. ನಂತರ 3ನೇ ವಿಡಿಯೋ ಹಾಕಿ ಚರ್ಚಿಸಿ.]