ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೆಪ್ಟೆಂಬರ್‌ 17–23

ಯೋಹಾನ 5-6

ಸೆಪ್ಟೆಂಬರ್‌ 17–23
  • ಗೀತೆ 138 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • ಸರಿಯಾದ ಉದ್ದೇಶದಿಂದ ಯೇಸುವನ್ನು ಹಿಂಬಾಲಿಸಿ”: (10 ನಿ.)

    • ಯೋಹಾ 6:9-11—ಸಾವಿರಾರು ಜನರಿಗೆ ಯೇಸು ಅದ್ಭುತವಾಗಿ ಊಟ ಕೊಟ್ಟನು (“ಸುಮಾರು 5,000 ಮಂದಿ ಪುರುಷರು ಕುಳಿತುಕೊಂಡರು” ಯೋಹಾ 6:10ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಯೋಹಾ 6:14, 24—ಯೇಸುವೇ ಮೆಸ್ಸೀಯ ಎಂದು ಜನರು ಗುರುತಿಸಿ ಮಾರನೇ ದಿನನೇ ಅವನನ್ನು ಹುಡುಕುತ್ತಾ ಹೋದರು (“ಪ್ರವಾದಿ” ಯೋಹಾ 6:14ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಯೋಹಾ 6:25-27, 54, 60, 66-69—ಯೇಸುವನ್ನು ಮತ್ತು ಅವನ ಶಿಷ್ಯರನ್ನು ಜನರು ತಪ್ಪಾದ ಉದ್ದೇಶದಿಂದ ಹಿಂಬಾಲಿಸಿದರು. ಆದ್ದರಿಂದಲೇ ಯೇಸುವಿನ ಕೆಲವು ಮಾತುಗಳನ್ನು ತಪ್ಪಾಗಿ ಅರ್ಥಮಾಡಿಕೊಂಡರು (“ನಶಿಸಿ ಹೋಗುವ ಆಹಾರ ... ನಿತ್ಯಜೀವಕ್ಕಾಗಿ ಉಳಿಯುವಂಥ ಆಹಾರ” ಯೋಹಾ 6:27ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ; “ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನಿಗೆ” ಯೋಹಾ 6:54ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ; ಕಾವಲಿನಬುರುಜು05 9/1 ಪುಟ 21 ಪ್ಯಾರ 13-14)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೋಹಾ 6:44—ಜನರನ್ನು ತಂದೆ ತನ್ನ ಕಡೆಗೆ ಹೇಗೆ ಸೆಳೆಯುತ್ತಾನೆ? (“ಅವನನ್ನು ಸೆಳೆದ” ಯೋಹಾ 6:44ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಯೋಹಾ 6:64—ತನಗೆ ಯೂದ ದ್ರೋಹ ಮಾಡುತ್ತಾನೆ ಎಂದು ಯೇಸುವಿಗೆ “ಆರಂಭದಿಂದಲೇ” ತಿಳಿದಿದ್ದು ಯಾವ ಅರ್ಥದಲ್ಲಿ? (“ತನಗೆ ನಂಬಿಕೆ ದ್ರೋಹ ಮಾಡುವವನು ಯಾರು ಎಂದು ... ಯೇಸುವಿಗೆ ತಿಳಿದಿತ್ತು,” “ಆರಂಭದಿಂದಲೇ” ಯೋಹಾ 6:64ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೋಹಾ 6:41-59

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವನು ನಿಮ್ಮ ಸೇವಾಕ್ಷೇತ್ರದಲ್ಲಿ ಸಾಮಾನ್ಯವಾಗಿರುವ ಆಕ್ಷೇಪಣೆಯೊಂದನ್ನು ಮಾಡುತ್ತಾನೆ.

  • ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವನು ತಾನು ಕ್ರೈಸ್ತ ಧರ್ಮಕ್ಕೆ ಸೇರಿದವನು ಎಂದು ಹೇಳುತ್ತಾನೆ.

  • ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 26

  • ನೀವು ಹೇಗೆ ಮಾಡಿದಿರಿ?: (5 ನಿ.) ಚರ್ಚೆ. ಸಂಭಾಷಣೆ ಆರಂಭಿಸಿ ಸಾಕ್ಷಿ ಕೊಡಲು ಅವಕಾಶ ಸಿಕ್ಕಿದ ಒಳ್ಳೇ ಅನುಭವಗಳನ್ನು ಹೇಳುವಂತೆ ಸಭಿಕರನ್ನು ಕೇಳಿ.

  • ಯಾವುದೂ ವ್ಯರ್ಥವಾಗಲಿಲ್ಲ”: (10 ನಿ.) ಚರ್ಚೆ. ಪರಿಸರಸ್ನೇಹಿ ವಿನ್ಯಾಸ ಯೆಹೋವನಿಗೆ ಗೌರವ ತರುತ್ತದೆ—ತುಣುಕು ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಸಿಹಿಸುದ್ದಿ ಪಾಠ 11 ಪ್ಯಾರ 3, 4

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 11 ಮತ್ತು ಪ್ರಾರ್ಥನೆ