ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 138

ಸುಂದರ ಕಿರೀಟ - ಬೆಳ್ಳಿ ಕೂದಲು

ಸುಂದರ ಕಿರೀಟ - ಬೆಳ್ಳಿ ಕೂದಲು

(ಜ್ಞಾನೋಕ್ತಿ 16:31)

  1. 1. ಬಾಳಿನ ಪ್ರಯಾಣದಿ

    ಯೌವನ ಮರೆ;

    ಸಾವಿರಾರು ಬಾಧೆಯ

    ತಾಳಿದ ಪಡೆ!

    ನೋವಿನಲ್ಲೂ ಸಂತಸ,

    ತಾಳ್ಮೆ ತೋರಿದ

    ವೀರರ ವಿಶ್ವಾಸವ

    ಎಂದೂ ವರ್ಧಿಸು.

    (ಪಲ್ಲವಿ)

    ದೇವಾ ನೀನೇ ನೋಡು

    ಎಂಥ ನಂಬಿಕೆ!

    ನೀಡು ನೀ ಹಾರೈಕೆ,

    ನಮ್ಮ ಕೋರಿಕೆ.

  2. 2. ಸುಂದರ ಕಿರೀಟವು

    ಬೆಳ್ಳಿ ಕೂದಲು!

    ದೇವ ಸೇವೆಗಾಗಿಯೇ

    ಜೀವ ಮೀಸಲು!

    ಪ್ರೀತಿಯಿಂದ ಮಾದರಿ

    ತೋರೋ ದೀನರು

    ದೇವರ ಕಣ್ಣೋಟದಿ

    ಎಂದೂ ಶ್ರೇಷ್ಠರು!

    (ಪಲ್ಲವಿ)

    ದೇವಾ ನೀನೇ ನೋಡು

    ಎಂಥ ನಂಬಿಕೆ!

    ನೀಡು ನೀ ಹಾರೈಕೆ,

    ನಮ್ಮ ಕೋರಿಕೆ.