ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 139

ಕಲ್ಪಿಸಿ ನೋಡು ದೇವರ ರಾಜ್ಯ!

ಕಲ್ಪಿಸಿ ನೋಡು ದೇವರ ರಾಜ್ಯ!

(ಪ್ರಕಟನೆ 21:1-5)

  1. 1. ದೇವ ರಾಜ್ಯ ಎಂಥ ಚೆಂದ!

    ಕಲ್ಪಿಸಿ ನೋಡು ನೀ ಆ ರಾಜ್ಯವ;

    ಸಾವು ನೋವು ಇಲ್ಲ ಆಗ,

    ಬಾಳಲ್ಲಿ ಎಂದೆಂದೂ ಆನಂದ;

    ದುಷ್ಟ ಜನ ಇರೋದಿಲ್ಲ,

    ನ್ಯಾಯ ನೀತಿ ಬಾಳೋದು ಸದಾ.

    ದೇವ ಕೊಡುವ ಶಾಶ್ವತ ಜೀವವ;

    ಸಂತೋಷದ ಹಾಡು ಕೇಳಿ ಬರೋದಾಗ:

    (ಪಲ್ಲವಿ)

    “ಯೆಹೋವ ದೇವಾ, ನೀನೇ ವಿಜೇತ!

    ನೂತನ ಲೋಕ ಪುತ್ರ ಮೂಲಕ.

    ಈ ಹೃದಯವು ಹಾಡಿದೆ ಕೀರ್ತಿಸುತ,

    ನಿಂಗೆ ಸಲ್ಲಲಿ ಮಹಿಮೆ, ಸ್ತುತಿ ಸದಾ!”

  2. 2. ದೇವ ಮಾತು ಈಡೇರುವ

    ಸಮಯವು ಬಹಳ ಮಧುರ;

    ಸುಳ್ಳಾಗದು ಆ ವಾಗ್ದಾನ

    ಕಾದಿದೆ ಹಾಯಾದ ಜೀವನ;

    ಮರಣದ ಸಂಕೋಲೆಗೆ

    ಬಂಧಿಯಾದ ಪ್ರಿಯರು ಆಗ

    ಎದ್ದು ಬರಲು ಮರಳಿ ಜೀವಂತ,

    ಉಲ್ಲಾಸದ ಗೀತೆ ಕೇಳಿ ಬರೋದಾಗ:

    (ಪಲ್ಲವಿ)

    “ಯೆಹೋವ ದೇವಾ, ನೀನೇ ವಿಜೇತ!

    ನೂತನ ಲೋಕ ಪುತ್ರ ಮೂಲಕ.

    ಈ ಹೃದಯವು ಹಾಡಿದೆ ಕೀರ್ತಿಸುತ,

    ನಿಂಗೆ ಸಲ್ಲಲಿ ಮಹಿಮೆ, ಸ್ತುತಿ ಸದಾ!”