ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 153

ಯೆಹೋವ ಕೊಡು ಧೈರ್ಯ

ಯೆಹೋವ ಕೊಡು ಧೈರ್ಯ

(2 ಅರಸುಗಳು 6:16)

  1. 1. ಭೀತಿ ನನ್ನ ಮುತ್ತಿ

    ದಾರಿ ಮೊಬ್ಬಾಗಿದೆ.

    ದೇವ ನೀನು ತೋರು ದಾರಿ;

    ನೀ ಮಾರ್ಗದರ್ಶಿಸು.

    ಬಾಳು ಮುಂದೆ ಕಷ್ಟ,

    ಸವಾಲು ಸಂಕಟ.

    ನಿಷ್ಠ ನೀನು ಯೆಹೋವನೇ,

    ನನ್ನ ರಕ್ಷಕನೇ.

    (ಪಲ್ಲವಿ)

    ಯೆಹೋವ, ಕೊಡು ನಂಬಿಕೆ

    ನಂಬಿ ನಾ ಸಾಗುವೆ.

    ಜೊತೆಯಲ್ಲೇ ಸ್ವರ್ಗೀಯ ಸೈನ್ಯ,

    ಶತ್ರುಗಳು ಶೂನ್ಯ.

    ಧೈರ್ಯ, ಕೊಡು ಧೈರ್ಯ;

    ಧೈರ್ಯದಿ ತಾಳುವೆ.

    ಯೆಹೋವ ಕೊಡು ಧೈರ್ಯ;

    ನಿಂದೇ ಮಹಾಜಯ.

  2. 2. ಭೀತಿಯಿಂದ ನಾನು

    ಮಂಕಾಗಿ ಹೋಗುವೆ.

    ಧೈರ್ಯದ ಬುಗ್ಗೆ ಯೆಹೋವ;

    ಸೋಲೇ ಇಲ್ಲದವ.

    ತುಂಬು ನೀನು ಧೈರ್ಯ,

    ಬೇಕು ಮನಸ್ಥೈರ್ಯ.

    ಸಾವು ನೋವಿನ ಸಂಕೋಲೆ

    ಸೋಲನ್ನು ತಾರದು.

    (ಪಲ್ಲವಿ)

    ಯೆಹೋವ, ಕೊಡು ನಂಬಿಕೆ

    ನಂಬಿ ನಾ ಸಾಗುವೆ

    ಜೊತೆಯಲ್ಲೇ ಸ್ವರ್ಗೀಯ ಸೈನ್ಯ,

    ಶತ್ರುಗಳು ಶೂನ್ಯ.

    ಧೈರ್ಯ, ಕೊಡು ಧೈರ್ಯ;

    ಧೈರ್ಯದಿ ತಾಳುವೆ.

    ಯೆಹೋವ ಕೊಡು ಧೈರ್ಯ;

    ನಿಂದೇ ಮಹಾಜಯ.

    (ಪಲ್ಲವಿ)

    ಯೆಹೋವ, ಕೊಡು ನಂಬಿಕೆ

    ನಂಬಿ ನಾ ಸಾಗುವೆ

    ಜೊತೆಯಲ್ಲೇ ಸ್ವರ್ಗೀಯ ಸೈನ್ಯ,

    ಶತ್ರುಗಳು ಶೂನ್ಯ.

    ಧೈರ್ಯ, ಕೊಡು ಧೈರ್ಯ;

    ಧೈರ್ಯದಿ ತಾಳುವೆ.

    ಯೆಹೋವ ಕೊಡು ಧೈರ್ಯ;

    ನಿಂದೇ ಮಹಾಜಯ.

    ಯೆಹೋವ ಕೊಡು ಧೈರ್ಯ;

    ನಿಂದೇ ಮಹಾಜಯ.