ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 57

ಎಲ್ಲಾ ರೀತಿಯ ಜನರಿಗೆ ಸಾರೋಣ

ಎಲ್ಲಾ ರೀತಿಯ ಜನರಿಗೆ ಸಾರೋಣ

(1 ತಿಮೊತಿ 2:4)

  1. 1. ಸಾರೋಣ ದೇವವಾಕ್ಯವ ಇಂದು

    ಪ್ರೀತಿಯ ಸುದ್ದಿ ಹಂಚೋಣ ಎಂದೂ.

    ಯೆಹೋವನು ಭೇದವ ತೋರಲ್ಲ

    ಆತನಂತೆ ಬಾಳೋಣ ನಾವೆಲ್ಲಾ.

    (ಪಲ್ಲವಿ)

    ಯಾವ ಊರೇ ಆಗಲಿ,

    ವ್ಯಕ್ತಿ ಹೇಗೆ ಕಾಣಲಿ,

    ಎಲ್ಲೆಲ್ಲೂ ರಾಜ್ಯವಾರ್ತೆ ಸಾರೋಣ.

    ಪ್ರೀತಿ ನಮ್ಮ ಪ್ರೇರಣೆ

    ಸಾರುತ್ತೇವೆ ಎಲ್ಲೆಡೆ,

    ಶಾಶ್ವತ ಜೀವವ ಪಡೆವಂತೆ.

  2. 2. ಯೆಹೋವ ಪ್ರೀತಿ ತೋರುವ ದೇವ

    ಆತ ಅಂತರಂಗವ ನೋಡುವ.

    ವ್ಯಕ್ತಿಯ ರೂಪ ಭಾಷೆ ಬೇಕಿಲ್ಲ,

    ನಿಸ್ವಾರ್ಥ ಪ್ರೀತಿ ಒಂದೆ ಸಾಕಲ್ಲ.

    (ಪಲ್ಲವಿ)

    ಯಾವ ಊರೇ ಆಗಲಿ,

    ವ್ಯಕ್ತಿ ಹೇಗೆ ಕಾಣಲಿ,

    ಎಲ್ಲೆಲ್ಲೂ ರಾಜ್ಯವಾರ್ತೆ ಸಾರೋಣ.

    ಪ್ರೀತಿ ನಮ್ಮ ಪ್ರೇರಣೆ

    ಸಾರುತ್ತೇವೆ ಎಲ್ಲೆಡೆ,

    ಶಾಶ್ವತ ಜೀವವ ಪಡೆವಂತೆ.

  3. 3. ಈ ಲೋಕದಾಸೆ ಬಿಟ್ಟು ಬಂದಾಗ,

    ಯೆಹೋವ ಸ್ವಾಗತಿಸುವ ಆಗ.

    ಈ ಸುದ್ದಿಯ ಎಲ್ಲೆಲ್ಲೂ ಸಾರೋಣ.

    ಸಂತೋಷದಿ ಈ ಸೇವೆ ಮಾಡೋಣ.

    (ಪಲ್ಲವಿ)

    ಯಾವ ಊರೇ ಆಗಲಿ,

    ವ್ಯಕ್ತಿ ಹೇಗೆ ಕಾಣಲಿ,

    ಎಲ್ಲೆಲ್ಲೂ ರಾಜ್ಯವಾರ್ತೆ ಸಾರೋಣ.

    ಪ್ರೀತಿ ನಮ್ಮ ಪ್ರೇರಣೆ

    ಸಾರುತ್ತೇವೆ ಎಲ್ಲೆಡೆ,

    ಶಾಶ್ವತ ಜೀವವ ಪಡೆವಂತೆ.