ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 54

ಜೀವಕ್ಕಿದು ದಾರಿ!

ಜೀವಕ್ಕಿದು ದಾರಿ!

(ಯೆಶಾಯ 30:20, 21)

  1. 1. ಕ್ರಿಸ್ತನು ಸಾಗಿದ ದಾರಿಯು ಮುಂದಿದೆ.

    ಆ ದಾರಿಗೆ ವಾಕ್ಯವು ದೀಪವಾಗಿದೆ,

    ಆ ದೀಪವೇ ಬಾಳಿಗೆ ಜ್ಯೋತಿ ತುಂಬಿದೆ

    ಆ ಜ್ಯೋತಿಯು ಶಾಂತಿಯ ದಾರಿ ತೋರಿದೆ.

    (ಪಲ್ಲವಿ)

    ಜೀವಕ್ಕಿದು ದಾರಿ! ದಾರಿ ಇದು!

    ಹಿಮ್ಮೆಟ್ಟದೆ, ಅತ್ತಿತ್ತ ನೋಡದೆ,

    ಸಾಗೋಣ ಹೀಗೆ ಎಂದೆಂದಿಗೂ.

    ಹೀಗೆ ಸಾಗೋಣ ನಾವೆಂದೆಂದಿಗೂ.

  2. 2. ಪ್ರೀತಿಯ ದಾರಿಗೆ ಯೆಹೋವ ಮೂಲನು

    ನಿಸ್ವಾರ್ಥ ಪ್ರೀತಿಯಿಂದ ಪೋಷಿಸಿದನು.

    ಪ್ರೀತಿಯ ತೋಳಲ್ಲಿ ಆಲಿಂಗಿಸಿದನು.

    ಜೀವದ ದಾರಿಗೆ ಸೆಳೆದುಕೊಂಡನು.

    (ಪಲ್ಲವಿ)

    ಜೀವಕ್ಕಿದು ದಾರಿ! ದಾರಿ ಇದು!

    ಹಿಮ್ಮೆಟ್ಟದೆ, ಅತ್ತಿತ್ತ ನೋಡದೆ,

    ಸಾಗೋಣ ಹೀಗೆ ಎಂದೆಂದಿಗೂ.

    ಹೀಗೆ ಸಾಗೋಣ ನಾವೆಂದೆಂದಿಗೂ.

  3. 3. ಪುತ್ರನ ತ್ಯಾಗ ಮಾಡಿ ಪ್ರೀತಿ ತೋರಿದ.

    ಎಂದೆಂದೂ ಬಾಳೋ ಭರವಸೆ ನೀಡಿದ.

    ಸಂಪೂರ್ಣ ಪ್ರೀತಿ ಮತ್ತು ಶಾಂತಿ ದಾರಿಯ

    ಮುಂದಿಟ್ಟು ಜೀವಕ್ಕೆ ಇದೆ ದಾರಿ ಎಂದ.

    (ಪಲ್ಲವಿ)

    ಜೀವಕ್ಕಿದು ದಾರಿ! ದಾರಿ ಇದು!

    ಹಿಮ್ಮೆಟ್ಟದೆ, ಅತ್ತಿತ್ತ ನೋಡದೆ,

    ಸಾಗೋಣ ಹೀಗೆ ಎಂದೆಂದಿಗೂ.

    ಹೀಗೆ ಸಾಗೋಣ ನಾವೆಂದೆಂದಿಗೂ.