ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 79

ಸ್ಥಿರವಾಗಿ ನಿಲ್ಲಲು ಕಲಿಸೋಣ

ಸ್ಥಿರವಾಗಿ ನಿಲ್ಲಲು ಕಲಿಸೋಣ

(ಮತ್ತಾಯ 28:19, 20)

  1. 1. ಪ್ರೀತಿಯ ಕೂಗನ್ನು ಕೇಳುತ್ತಾ

    ಮುಂದಾದ ಮಂದೆಯನ್ನು,

    ಯೆಹೋವ ಪೋಷಿಸೋ ರೀತಿಯ

    ಕಾಣೋದೇ ನಮ್ಮಾನಂದ.

    (ಪಲ್ಲವಿ)

    ಕೇಳು ಯೆಹೋವ ದೇವರೇ,

    ಮಂದೆಗೆ ಆಗು ಆಸರೆ.

    ಬೆನ್ನೆಲುಬಾಗಿ ನೀನಿರು. ಕೈ ಹಿಡಿದು,

    ನಿಲ್ಲೋಕೆ ಸಾಮರ್ಥ್ಯ ನೀಡು.

  2. 2. ನೋವಲ್ಲಿ ಬೇಸತ್ತು ಹೋದಾಗ,

    ಧೈರ್ಯದಿ ಸಾಗೋ ಹಾಗೆ,

    ಸಂತೈಸಿ, ಪ್ರಾರ್ಥಿಸಿ, ಬೋಧಿಸಿ;

    ಬೆಂಬಲ ನೀಡಿದೆವು.

    (ಪಲ್ಲವಿ)

    ಕೇಳು ಯೆಹೋವ ದೇವರೇ,

    ಮಂದೆಗೆ ಆಗು ಆಸರೆ.

    ಬೆನ್ನೆಲುಬಾಗಿ ನೀನಿರು. ಕೈ ಹಿಡಿದು,

    ನಿಲ್ಲೋಕೆ ಸಾಮರ್ಥ್ಯ ನೀಡು.

  3. 3. ನಿನ್ನಲ್ಲೇ ವಿಶ್ವಾಸ ತೋರಲಿ

    ನೂರೆಂಟು ಕಷ್ಟದಲ್ಲೂ.

    ಓಡುತ್ತಾ ಕ್ರಿಸ್ತನ ದಾರೀಲಿ,

    ಗೆಲ್ಲಲಿ ಆಶೀರ್ವಾದ.

    (ಪಲ್ಲವಿ)

    ಕೇಳು ಯೆಹೋವ ದೇವರೇ,

    ಮಂದೆಗೆ ಆಗು ಆಸರೆ.

    ಬೆನ್ನೆಲುಬಾಗಿ ನೀನಿರು. ಕೈ ಹಿಡಿದು,

    ನಿಲ್ಲೋಕೆ ಸಾಮರ್ಥ್ಯ ನೀಡು.